Party Rounds | ಸಚಿವ ವಿ. ಸೋಮಣ್ಣ ಕಾಂಗ್ರೆಸ್‌ಗೆ ಹೋಗ್ತಾರಾ?

Mar 8, 2023, 8:30 PM IST

ಬೆಂಗಳೂರು(ಮಾ.08): ವಸತಿ ಸಚಿವ ವಿ. ಸೋಮಣ್ಣ ಕಾಂಗ್ರೆಸ್‌ ಹೋಗ್ತಾರೆ ಅಂತ ಕಾಂಗ್ರೆಸ್‌ನೊಳಗೂ ಟಾಕ್‌ ಇದೆ, ಬಿಜೆಪಿಯಲ್ಲೂ ಚರ್ಚೆ ನಡೆಯುತ್ತಿದೆ. ಆದರೆ, ಇದಕ್ಕೆ ಸ್ಪಷ್ಟತೆ ಮಾತ್ರ ಇನ್ನೂ ಸಿಕ್ಕಿಲ್ಲ. ನಾನು ಹೋಗ್ತೀನಿ ಅಂತ ಸೋಮಣ್ಣ ಅವರೂ ಹೇಳಿಲ್ಲ, ಆದ್ರೆ, ನನ್ನ ಮನಸ್ಸು ಮತ್ತು ಆರೋಗ್ಯ ಸರಿಯಲ್ಲ ಅಂತ ಹೇಳುವ ಮೂಲಕ ತಮಗೆ ಅಸಮಾಧಾನ ಇರುವ ಬಗ್ಗೆ ಪರೋಕ್ಷವಾಗಿ ಹೇಳಿದ್ದಾರೆ. ಅಸಮಾಧಾನಗಳನ್ನ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಬಿಜೆಪಿ ನಾಯಕರ ಮೇಲೆ ಸೋಮಣ್ಣ ಮುನಿಸಿಕೊಂಡಿದ್ದಾರೆ. ಹೀಗಾಗಿ ಸೋಮಣ್ಣ ಅವರು ಬಿಜೆಪಿ ಪಾಲಿಗೆ ದೊಡ್ಡ ತಲೆನೋವಾಗಿದ್ದಾರೆ. 

Assembly election: ಬಿಜೆಪಿ ಟಿಕೆಟ್‌ ಹಂಚಿಕೆ: ಮತ್ತೊಂದು ಬಾಂಬ್‌ ಸಿಡಿಸಿದ ಡಿ.ವಿ. ಸದಾನಂದ ಗೌಡ!