ಸೋನಿಯಾ ಭೇಟಿಯಾದ ಸಿದ್ದು: ರಾಜ್ಯ ರಾಜಕಾರಣದ ಬಿಸಿ-ಬಿಸಿ ಚರ್ಚೆ..!

Oct 16, 2019, 5:33 PM IST

ನವದೆಹಲಿ (ಅ. 16): ಕರ್ನಾಟಕ ಉಪಚುನಾವಣೆಗೆ ರಾಜ್ಯದಲ್ಲಿ ಎಲ್ಲ ಪಕ್ಷಗಳೂ ಸಕಲ ರೀತಿಯ ಸಿದ್ಧತೆ ನಡೆಸಿವೆ. ಈಗಾಗಲೇ  ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ಒಂದು ಸುತ್ತಿನ ಸಭೆ ನಡೆಸಿದ್ದು,  ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. 

ಹೆಚ್ಚಿದ ಉಪಚುನಾವಣೆ ಕಾವು: ಸಿದ್ದರಾಮಯ್ಯಗೆ ಖೆಡ್ಡಾ ತೋಡಿದ ಕೈ ನಾಯಕರು?

ನಿನ್ನೆಯಷ್ಟೇ  (ಮಂಗಳವಾರ) ಕೆಪಿಸಿಸಿ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಜೊತೆ ರಾಜ್ಯ ಕಾಂಗ್ರೆಸ್ ನಾಯಕರು ಸಭೆ ನಡೆಸಿದ್ದಾರೆ. ಆ ಪಟ್ಟಿಗೆ ಹೈಕಮಾಂಡ್ ಮುದ್ರೆ ಬೀಳುವುದೊಂದೇ ಬಾಕಿಯಿದೆ.

ಇದರ ಬೆನ್ನಲ್ಲೇ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ದಿಢೀರ್ ಬುಲಾವ್ ನೀಡಿದ್ದು, ಭಾರೀ ಕುತೂಹಲ ಮೂಡಿಸಿದೆ.

ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿ ಹಾರಿರುವ ಸಿದ್ದು, ಇಂದು (ಬುಧವಾರ) ಸೋನಿಯಾ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣದ ಬಿಸಿ-ಬಿಸಿ ಚರ್ಚೆಗಳನ್ನು ಮಾಡಿದ್ದಾರೆ. ಹಾಗಾದ್ರೆ ಏನೆಲ್ಲ ಚರ್ಚೆಗಳಾದವು ಎನ್ನುವುದನ್ನು ವಿಡಿಯೋನಲ್ಲಿ ನೋಡಿ.