May 7, 2023, 6:43 PM IST
ಬೆಂಗಳೂರು(ಮೇ.07): ಪ್ರಧಾನಿ ನರೇಂದ್ರ ಮೋದಿ ಆಡಳಿತ ಹಾಗೂ ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಆಡಳಿತದಲ್ಲಿ ಸಮಗ್ರ ಅಭಿವೃದ್ಧಿಯಾಗುತ್ತಿದೆ. ಒಂದು ಪ್ರಾಂತ್ಯಕ್ಕೆ ಸೀಮಿತವಾಗಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ಏಷ್ಯಾನೆಟ್ ಸುವರ್ಣನ್ಯೂಸ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅಮಿತ್ ಶಾ, ದೇಶದಲ್ಲಿ ಬಿಜೆಪಿಗೆ ಮತ ನೀಡುವ ಹೊಸ ವರ್ಗ ಸೃಷ್ಟಿಯಾಗಿದೆ ಎಂದರು. ಪ್ರಧಾನಿ ಮೋದಿ ಜಾತಿ ವ್ಯವಸ್ಥೆಯನ್ನು ನಿರ್ಲಿಪ್ತಗೊಳಿಸಿದ್ದಾರೆ. ಪ್ರಧಾನಿ ಮಂತ್ರಿ ಅವಾಸ್ ಯೋಜನೆಯಡಿ 4 ಲಕ್ಷ ಕುಟುಂಬಗಳಿಗೆ ಮನೆ ನೀಡಲಾಗಿದೆ. 43 ಲಕ್ಷ ಕುಟುಂಬಗಳಿಗೆ ಜಲಜೀವನ್ ಮಿಷನ್ ನೀರು ಸಿಗುತ್ತಿದೆ. 48 ಲಕ್ಷ ಕುಟುಂಬಳಿಗೆ ಶೌಚಾಲಯ ಸಿಕ್ಕಿದೆ. 4 ಕೋಟಿ ಜನರಿಗೆ ಉಚಿತ ಪಡಿತರ ಸಿಗುತ್ತಿದೆ. 1.38 ಕೋಟಿ ಜನರಿಗೆ ಸ್ವಾಸ್ಥ್ಯ ವಿಮಾ ಯೋಜನೆ ಸೌಲಭ್ಯ ಸಿಗುತ್ತಿದೆ. ಇದರಿಂದ ಇದೀಗ ಹೊಸ ವೋಟ್ ಬ್ಯಾಂಕ್ ಹುಟ್ಟಿಕೊಂಡಿದೆ. ಇದು ಸೌಲಭ್ಯ ಪಡೆದವರ ಹೊಸ ವರ್ಗ. ಇದು ಬಿಜೆಪಿ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.