May 10, 2023, 2:50 PM IST
ಬೆಂಗಳೂರು (ಮೇ.10): ಉರಿ ಬಿಸಿಲಲ್ಲೂ ಜನ ಕ್ಯಾಂಪೇನ್‌ಗೆ ಬಂದಿದ್ರು, ಮತದಾನಕ್ಕೂ ಅದೇ ರೀತಿ ಬರಲಿ. ಉತ್ತರ ಕರ್ನಾಟಕ ಪ್ರಚಾರ ವೇಳೆ ಸಾಕಷ್ಟು ಸಮಸ್ಯೆಗಳನ್ನ ಕಂಡೆ. ಅವೆಲ್ಲವೂ ಈಡೇರಬೇಕಿದೆ, ಗೆದ್ದವರು ಈಡೇರಲಿಸಬೇಕಿದೆ. ಪ್ರಚಾರಕ್ಕೆ ಹೋಗುವ ಮೊದಲು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೆ ಎಂದು ನಟ ಕಿಚ್ಚ ಸುದೀಪ್ ಹೇಳಿದರು. ನಾನು ಪ್ರಚಾರ ಮಾಡಿದ ಮಾತ್ರಕ್ಕೆ ಸುಮ್ಮನೆ ಇರವುದೂ ಇಲ್ಲ. ಗೆದ್ದವರು ಕೆಲಸ ಮಾಡದಿದ್ದಾಗ ಆ ಸ್ಥಳಕ್ಕೆ ಹೋಗಿ ಮೈಕ್‌ನಲ್ಲಿ ಕೂಗಿ ಹೇಳುತ್ತೇನೆ, ನಾನು ಯಾವುದಕ್ಕೂ ಹಿಂದೇಟು ಹಾಕುವುದಿಲ್ಲ, ಹಣ ಹೆಂಡ ತಗೊಳೋರು ಇರೋವರೆಗೂ ಕೊಡೋರು ಇರ್ತಾರೆ, ಮೊದಲು ತಗೊಳೋರು ಸರಿಯಾಗಬೇಕು, ನಮ್ಮಲ್ಲಿ ತಪ್ಪಿಟ್ಟುಕೊಂಡು ಅವರನ್ನ ದೂರಬಾರದು. ನನ್ನ ಮಗಳಿಗೆ ಮೊದಲ ಮತದಾನ ಇದು. ಮನೆಯಿಂದ ಬೂತ್ ವರೆಗೂ ವಿಡಿಯೋ ಮಾಡಿಕೊಂಡೆ. ಎಲ್ಲವನ್ನೂ ನಾನು ನೆನಪಿಗಾಗಿ ಇಟ್ಟುಕೊಳ್ಳುತ್ತೇನೆ. ಸಾನ್ವಿ ತನ್ನ ತಾತನ ಜೊತೆ ಚರ್ಚಿಸಿ ಯಾರಿಗೆ ಮತ ಹಾಕಬೇಕು, ಪಕ್ಷದ ಗುರುತಿನ ಬಗ್ಗೆ ಸಾಕಷ್ಟು ಮಾಹಿತಿ ಪಡೆದಳು ಎಂದು ಸುದೀಪ್ ತಿಳಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಇಂದು (ಮೇ.10) ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.