ಕೈ 3ನೇ ಪಟ್ಟಿ ಬಿಡುಗಡೆ, ಅಖಂಡ ಶ್ರೀನಿವಾಸ್ ಮೂರ್ತಿ ಕಾಂಗ್ರೆಸ್‌ಗೆ ಗುಡ್‌ಬೈ

Apr 16, 2023, 12:49 PM IST

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ.ಕಾಂಗ್ರೆಸ್‌ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು,43 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಟ್ಟಿದೆ. ಹಾಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ 3ನೇ ಪಟ್ಟಿಯಲ್ಲು ಟಿಕೆಟ್ ನೀಡಲ್ಲವಾಗಿದ್ದು, ಇದೀಗ ಪುಲಕೇಶಿ ನಗರದ ಶಾಸಕ  ಅಖಂಡ ಕಾಂಗ್ರೆಸ್‌ ವಿರುದ್ಧ  ಸಿಡಿದು ರಾಜೀನಾಮೆ ನೀಡಲು ಮುಂದಾಗಿದ್ದಾರೆ.ಸಾಕಷ್ಟು ಪ್ರಯತ್ನ ನಡೆಸಿದ್ದರೂ ಮೂರನೇ ಪಟ್ಟಿಯಲ್ಲೂ‌ ಅವರ ಹೆಸರು ಘೋಷಣೆ ಆಗಿಲ್ಲ. ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ಅಖಂಡ ಶ್ರೀನಿವಾಸ್ ಮೂರ್ತಿಗೆ ಟಿಕೆಟ್ ಕೊಡಬಾರದು ಎಂಬ ಬೇಡಿಕೆ ಸ್ಥಳೀಯವಾಗಿದೆ. ಈ ಹಿನ್ನೆಲೆಯಲ್ಲಿ ಮೌಲವಿಗಳ ನಿಯೋಗವೂ ದೆಹಲಿಗೆ ತೆರಳಿ ಮನವಿ ಸಲ್ಲಿಸಿತ್ತು ಎನ್ನಲಾಗಿದೆ.