JanaMata: 10 ಪ್ರಶ್ನೆ, 35 ಲಕ್ಷ ಜನರ ಉತ್ತರ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಡಿಜಿಟಲ್‌ ಜನಾಭಿಪ್ರಾಯ!

Apr 21, 2023, 9:56 PM IST

ಬೆಂಗಳೂರು (ಏ.21): ಪ್ರಸ್ತುತ ರಾಜ್ಯ ಸರ್ಕಾರದ ಆಡಳಿತ ತೃಪ್ತಿಕರವಾಗಿದೆಯೇ..? ನಿಮ್ಮ ಪ್ರಕಾರ ಯಾವುದು ಹೆಚ್ಚು ಭ್ರಷ್ಟ ಸರ್ಕಾರ?  ಮುಸ್ಲಿಂ ಮೀಸಲಾತಿ ರದ್ದುಗೊಳಿಸಿ ಆ ಪ್ರಮಾಣವನ್ನು ಒಕ್ಕಲಿಗ, ಲಿಂಗಾಯತರಿಗೆ ಹಂಚಿಕೆ ಮಾಡಿದ ಬಿಜೆಪಿ ಸರ್ಕಾರದ ನಿರ್ಧಾರ ಸರಿಯೇ? ಇಂಥವೇ 10 ಪ್ರಶ್ನೆಗಳನ್ನು ಇರಿಸಿಕೊಂಡು ಏಷ್ಯಾನೆಟ್‌ ಸುವರ್ಣನ್ಯೂಸ್‌ ಕನ್ನಡ ವೆಬ್‌ಸೈಟ್‌ ನಡೆಸಿದ ಆನ್‌ಲೈನ್‌ ಸಮೀಕ್ಷೆಗೆ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. ಈ ಪ್ರಶ್ನೆಗಳಿಗೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಉತ್ತರ ನೀಡಿದ್ದು ಬರೋಬ್ಬರಿ 35 ಲಕ್ಷ ಮಂದಿ. ಹಾಲಿ ಸರ್ಕಾರದ ಬಗ್ಗೆ ಜನರು ಎಷ್ಟು ಖುಷಿಯಾಗಿದ್ದಾರೆ, ರಾಹುಲ್‌ ಗಾಂಧಿ-ನರೇಂದ್ರ ಮೋದಿ ಕುರಿತಾಗಿ ಜನರು ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ.

JanaMata: ಮೋದಿಯಿದ್ರೆ ಮಾತ್ರ ಬಿಜೆಪಿಗೆ ಬಹುಪರಾಕ್‌, ಇಲ್ದಿದ್ರೆ ಫುಲ್‌ ವೀಕ್‌!

ಗಮನಕ್ಕೆ: ಇದು ವೈಜ್ಞಾನಿಕವಾಗಿ ಮಾಡಿರುವ ಸಮೀಕ್ಷೆಯಲ್ಲ. ಇಲ್ಲಿ ಪ್ರತಿಕ್ರಿಯಿಸಿದ ಶೇಕಡಾ 48 ರಷ್ಟು ಜನರು ಕರ್ನಾಟಕದವರಲ್ಲ. ಹಾಗಾಗಿ ಹೆಚ್ಚಿನವರು ಇಲ್ಲಿ ಮತದಾರರಲ್ಲ. ಇಂಗ್ಲೀಷ್‌ನಲ್ಲಿ ಬಂದಿರುವ ಉತ್ತರಗಳು ಹಾಗೂ ಕನ್ನಡದಲ್ಲಿ ಬಂದಿರುವ ಉತ್ತರಗಳಿಗಿಂದ ಭಿನ್ನವಾಗಿರುತ್ತದೆ. ಕನ್ನಡದಲ್ಲಿ ಉತ್ತರಗಳು ರಾಜ್ಯದಲ್ಲಿನ ನೈಜ ಪರಿಸ್ಥಿತಿಗೆ ಹತ್ತಿರವಾಗಬಹುದು.