Mar 30, 2023, 6:17 PM IST
ಬೆಂಗಳೂರು (ಮಾ.30): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇರೋದು ಒಂದಲ್ಲ, ಎರಡಲ್ಲ, ಇರೋದು ಬರೋಬ್ಬರಿ 28 ಕ್ಷೇತ್ರ. ಇವುಗಳಲ್ಲಿ ಗರಿಷ್ಠ ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು ಅನ್ನೋದು ರಾಜ್ಯದ ಮೂರೂ ಪಕ್ಷಗಳ ಪ್ಲ್ಯಾನ್ ಸಿದ್ಧವಾಗಿದೆ.
28 ರಲ್ಲಿ ಕನಿಷ್ಢ 25 ಸ್ಥಾನಗಳಲ್ಲಿ ಗೆಲ್ಲಬೇಕು ಅನ್ನೋದು ಬಿಜೆಪಿ ಗುರಿಯಾಗಿದ್ದರೆ, ಕಾಂಗ್ರೆಸ್ ಕಳೆದ ಬಾರಿಗಿಂತ ಹೆಚ್ಚಿನ ಸೀಟ್ ಗೆಲ್ಲುವ ಗುರಿಯಲ್ಲಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನಗಳಲ್ಲಿ ಗೆಲುವು ಕಂಡಿದ್ದರೆ, ಬಿಜೆಪಿ 11 ಸ್ಥಾನಗಳಲ್ಲಿ ಜಯಿಸಿತ್ತು. ಜೆಡಿಎಸ್ 2 ಸ್ಥಾನಗಳಲ್ಲಿ ಗೆಲುವು ಕಂಡಿತ್ತು.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್... ಯಾರಪಾಲಿಗೆ ಕರುನಾಡ ಕಿರೀಟ?
2018ಕ್ಕೆ ಹೋಲಿಸಿದರೆ, ಈ ಬಾರಿಯ ಚಿತ್ರಣವೇ ಬದಲಾಗಿದೆ. ಈಗಾಗಲೇ ಮೂರು ಪಕ್ಷಗಳು ಕೂಡ ರಾಜ್ಯದೊಂದಿಗೆ ರಾಜಧಾನಿ ವಲಯಕ್ಕೂ ಹೆಚ್ಚಿನ ಗಮನ ನೀಡಿದೆ.ಲೋಕಸಭೆಯಲ್ಲಿ ಬಿಜೆಪಿ ಗರಿಷ್ಠ ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಆದರೆ, ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಗಳೂರಿನಲ್ಲಿ ಹೆಚ್ಚು ಸ್ಥಾನ ಗೆದ್ದಿತ್ತು.