May 5, 2023, 11:21 PM IST
ಬೆಂಗಳೂರು (ಮೇ.5): ಪ್ರಧಾನಿ ನರೇಂದ್ರ ಮೋದಿ ಅವರ ಕರ್ನಾಟಕ ಚುನಾವಣೆ ಪ್ರಚಾರದ ಮೂರನೇ ಹಂತದ ಮೊದಲ ದಿನ ಭರ್ಜರಿಯಾಗಿ ನಡೆದಿದೆ. ದೆಹಲಿಯಿಂದ ಚಳ್ಳಕೆರೆಗೆ ಬಂದಿದ್ದ ಪ್ರಧಾನಿ ಮೋದಿ, ಅಲ್ಲಿಂದ ಬಳ್ಳಾರಿಗೆ ತೆರಳಿ ಬೃಹತ್ ಸಮಾವೇಶ ನಡೆಸಿದರು. ಆ ಬಳಿಕ ತುಮಕೂರಿನಲ್ಲಿ ಕೂಡ ಸಮಾವೇಶ ಮಾಡಿದರು.
ತುಮಕೂರಿನಲ್ಲಿ ಪ್ರಧಾನಿ ಮೋದಿಗೆ ಕೊಬ್ಬರಿಯ ಹಾರ ಹಾಕಿ ಸನ್ಮಾನಿಸಲಾಯಿತು. ರೋಡ್ ಶೋ ನಿಗದಿಯಾಗದೇ ಇದ್ದರೂ, ಇದ್ದ ಜನರನ್ನು ನೋಡಿ ಸಣ್ಣ ಪ್ರಮಾಣದ ರೋಡ್ ಶೋ ಕೂಡ ನಡೆಸಿದರು. ಸಮಾವೇಶದಲ್ಲಿ ಕುವೆಂಪು ಅವರ ಸಾಲುಗಳನ್ನು ಹೇಳುವ ಮೂಲಕ ಮೋದಿ ಗಮನಸೆಳೆದರು.
ಪ್ರಧಾನಿ ಮೋದಿ ರೋಡ್ ಶೋ ರಥದ ವೇಗದಲ್ಲಿ ಬದಲಾವಣೆ! ಯಾವೆಲ್ಲ ರಸ್ತೆಗಳು ಬಂದ್?
ಇನ್ನು ಬೆಂಗಳೂರಿನಲ್ಲಿ ಆದಷ್ಟು ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಎರಡು ದಿನಗಳ ಕಾಲ ಎರಡು ಬೃಹತ್ ರೋಡ್ ಶೋ ಬೆಂಗಳೂರಿನಲ್ಲಿ ನಡೆಯಲಿದೆ. ಒಟ್ಟಾರೆ, ಉದ್ಯಾನನಗರಿಯಲ್ಲಿ ಮೋದಿ 37 ಕಿಲೋಮೀಟರ್ ರೋಡ್ ಶೋ ಮಾಡಲಿದ್ದಾರೆ.