Karnataka Assembly Election 2023: ಬೆಂಗಳೂರು ಗ್ರಾಮಾಂತರದಲ್ಲಿ 3 ಪಕ್ಷಗಳಿಂದ ಟಿಕೆಟ್ ಲಾಭಿ

Dec 17, 2022, 7:29 PM IST

ಬೆಂಗಳೂರು (ಡಿ.17): ಒಕ್ಕಲಿಗರ ಪ್ರಾಬಲ್ಯ ಹೊಂದಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 4 ಕ್ಷೇತ್ರಗಳಿದ್ದು, ಕಾಂಗ್ರೆಸ್ 1 ಕ್ಷೇತ್ರ ಜೆಡಿಎಸ್ 2 ಕ್ಷೇತ್ರ ಮತ್ತು ಪಕ್ಷೇತರ 1 ಕ್ಷೇತ್ರ ಗೆದ್ದಿದೆ. ಆದರೆ ಈವರೆಗೆ ಬಿಜೆಪಿ ಮಾತ್ರ 1 ಖಾತೆ ತೆರೆದಿಲ್ಲ. ಈ ಬಾರಿ ಖಾತೆ ತೆರೆಯಲು ಬಿಜೆಪಿ ಶತಾಯಗತಾಯ ಪ್ರಯತ್ನಿಸುತ್ತಿದೆ. ದೊಡ್ಡಬಳ್ಳಾಪುರದಲ್ಲಿ ಟಿಕೆಟ್ಗಾಗಿ 3 ಪಕ್ಷಗಳು ಲಾಭಿ ನಡೆಸುತ್ತಿದೆ. ಹೇಳಿಕೇಳಿ ಈ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ. ಕೈ ನಾಯಕ ಟಿ ವೆಂಕಟರಮಣಯ್ಯ ಸತತ ಎರಡು ಬಾರಿ ಶಾಸಕರಾಗಿದ್ದು, ಈ ಬಾರಿಯೂ ಕಾಂಗ್ರೆಸ್ ನಿಂದ ಟಿಕೆಟ್ ಬಯಸಿದ್ದಾರೆ.  ಇದರ ಜೊತೆಗೆ ಕೆಎಂಎಫ್ ನಿರ್ದೇಶಕ ಬಿಸಿ ಆನಂದ್ ಕುಮಾರ್ ಕೂಡ ಕಾಂಗ್ರೆಸ್ ನಿಂದ ಟಿಕೆಟ್ ಬಯಸಿದ್ದಾರೆ.