ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌... ಯಾರಪಾಲಿಗೆ ಕರುನಾಡ ಕಿರೀಟ?

Mar 30, 2023, 5:56 PM IST

ಬೆಂಗಳೂರು: ಕರುನಾಡ ಕುರುಕ್ಷೇತ್ರದಲ್ಲಿ ಮೂರು ಪಕ್ಷಗಳ ಹತ್ತಾರು ಅಸ್ತ್ರಗಳು ಇಲ್ಲಿ ಬಳಕೆ ಆಗುತ್ತಿವೆ. ಮುಂದಿನ 41 ದಿನಗಳು ರಾಜ್ಯದ ರಾಜಕೀಯ ಪಕ್ಷಗಳಿಗೆ ನಿರ್ಣಾಯಕ ಆಗಿರಲಿದೆ. ಇನ್ನು ರಾಜ್ಯದ ಕದನ ಕುತೂಹಲದಲ್ಲಿ ಬಿಜೆಪಿ ಈ ಬಾರಿಯೂ ಲಿಂಗಾಯತ ಮತಗಳನ್ನು ಹಿಡಿದಿಟ್ಟುಕೊಳ್ಳುತ್ತದೆಯೇ? ದಲಿತರ ವೋಟ್‌ ಬ್ಯಾಂಕ್‌ನಿಂದ ಮತ್ತೆ ಕಾಂಗ್ರೆಸ್‌ ಪುಟಿದೇಳುತ್ತದೆಯೇ? ಒಕ್ಕಲಿಗರ ಭದ್ರಕೋಟೆಯಲ್ಲಿ ಮತ್ತೆ ಜೆಡಿಎಸ್‌ ಗೆದ್ದು ಬೀಗುತ್ತದೆಯೇ ಎಂಬ ಕುತೂಹಲ ಕೆರಳಿದೆ.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಕಂಡುಬರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಭ್ರಷ್ಟಾಷಾರ ಆರೋಪ ಮತ್ತು ದಿನಬಳಕೆ ವಸ್ತುಗಳ ಏರಿಕೆ ದುಷ್ಪರಿಣಾಮ ಬೀರಲಿದೆಯೇ.? ಅಥವಾ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ಹೆಚ್ಚಳ ಹಾಗೂ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಡಿ ಮೀಸಲಾತಿ ಹಂಚಿಕೆಯಿಂದ ಬಿಜೆಪಿಗೆ ಅನುಕೂಲ ಆಗಲಿದೆಯೇ ಎಂಬುದು ಕಾದುನೋಡಬೇಕಿದೆ.