Dec 6, 2020, 5:34 PM IST
ಬೆಂಗಳೂರು (ಡಿ. 06): ಸಂಪುಟ ವಿಸ್ತರಣೆ ಕಗ್ಗಂಟು ಬಗೆಹರಿಯಲು ಸಂಕ್ರಾಂತಿಯವರೆಗೆ ಕಾಯುವ ಲಕ್ಷಣಗಳು ರಾಜ್ಯ ರಾಜಕಾರಣದಲ್ಲಿ ಕಾಣಿಸುತ್ತಿವೆ. ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ ಮಾಡಬೇಕು ಎನ್ನುವ ಬಿಎಸ್‌ವೈ ಇಂಗಿತಕ್ಕೆ ಹೈಕಮಾಂಡ್‌ಗೆ ಅಸ್ತು ಎನ್ನುತ್ತಿಲ್ಲ.
ಅಧಿವೇಶನ ಮುಗಿದ ಬೆನ್ನಲ್ಲೇ ಗ್ರಾಮ ಪಂಚಾಯತ್ ಚುನಾವಣೆ ಅಬ್ಬರ ಶುರುವಾಗುವುದು. ಅದರ ಬೆನ್ನಲ್ಲೇ ಹೊಸ ವರ್ಷದ ಸಂಕ್ರಾಂತಿವರೆಗೆ ಧನುರ್ಮಾಸ ಇರಲಿದೆ. ಹೀಗಾಗಿ, ಆ ಚುನಾವಣೆ, ಧನುರ್ಮಾಸ ಎಲ್ಲ ಮುಗಿಸಿ ಸಂಕ್ರಾಂತಿ ಬಳಿಕ ಸಂಪುಟ ಕಸರತ್ತಿಗೆ ಮುಕ್ತಿ ಸಿಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಸಿದ್ದು ಟ್ರ್ಯಾಪ್‌ಗೆ ಬಿದ್ದೆ, ಕಾಂಗ್ರೆಸ್‌ನಿಂದ ಸರ್ವನಾಶವಾದೆ; ದಳಪತಿ ಕುಮಾರಣ್ಣ ಕೆರಳಿದ್ದೇಕೆ?
ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದ ಯಡಿಯೂರಪ್ಪ ಅವರು ತಾವು ನೀಡಿದ ವಾಗ್ದಾನದಂತೆ ಸರ್ಕಾರ ರಚಿಸಲು ಕಾರಣರಾದ ಅನ್ಯ ಪಕ್ಷಗಳಿಂದ ವಲಸೆ ಬಂದವರಿಗೆ ವಿಳಂಬ ಮಾಡದೆ ಸಚಿವ ಸ್ಥಾನ ನೀಡುವ ಅನಿವಾರ್ಯತೆಯನ್ನು ವಿವರಿಸಿದ್ದರು. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೊಂದಿಗೆ ಚರ್ಚಿಸಿ ತಿಳಿಸುವುದಾಗಿ ನಡ್ಡಾ ಅವರೂ ಭರವಸೆ ನೀಡಿದ್ದಾರೆ. ಹಾಗಾದರೆ ಸಂಪುಟಕ್ಕೆ ಯಾರು ಇನ್, ಯಾರು ಔಟ್? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್..!