'ನಾವು ಜೀವಂತವಾಗಿದ್ದೇವೆ ಎಂದು ತೋರಿಸಿಕೊಳ್ಳಲು ಕಾಂಗ್ರೆಸ್ ಬಂದ್‌ಗೆ ಬೆಂಬಲ ನೀಡಿದೆ'

Dec 8, 2020, 5:11 PM IST

ಬೆಂಗಳೂರು (ಡಿ. 08): ಕೇಂದ್ರ ಸರ್ಕಾರ ರೈತರ ಪರ ಇದೆ. ರೈತರ ಪರ ಇರೋದಕ್ಕೆ ಹೈದರಾಬಾದ್‌ನಲ್ಲಿ ಗೆದ್ದಿದೆ.  ಡಿಕೆ ಶಿವಕುಮಾರ್‌ಗೆ ತಲೆ ಕೆಟ್ಟಿದೆ' ಎಂದು ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. 

'4 ವಿಧಾನ ಪರಿಷತ್ ಚುನಾವಣೆ, ಶಿರಾ, ಆರ್‌ ಆರ್ ನಗರದಲ್ಲಿ ಕಾಂಗ್ರೆಸ್ ಅಡ್ರೆಸ್‌ಗಿಲ್ಲ. ಎಲ್ಲಾ ಕಡೆ ಬಿಜೆಪಿ ಗೆದ್ದಿದೆ. ನ್ಯಾಯವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ರಾಜಿನಾಮೆ ಕೊಡಬೇಕಿತ್ತು.. ಹೇಗೋ ಬದುಕಬೇಕು ಎಂದು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಇಂದು ಬಂದ್‌ಗೆ ಬೆಂಬಲ ಕೊಟ್ಟಿರೋದು ನಾವು ಕೂಡಾ ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ಮಾಡುತ್ತಿರುವ ಕುತಂತ್ರ ರಾಜಕಾರಣ' ಎಂದು ಟೀಕಿಸಿದ್ದಾರೆ. 

ಕಪ್ಪು ಪಟ್ಟಿ ಹಾಕಿದರೇನು ಬಿಳಿ ಪಟ್ಟಿ ಹಾಕಿದರೇನು? ಬಿಎಸ್‌ವೈ ವ್ಯಂಗ್ಯ