'ಸಿದ್ರಾಮಯ್ಯ ಸಿಎಂ ಆಗಿದ್ದಾಗ ಡ್ರಗ್ ತನಿಖೆ ನಡೆಯದಂತೆ ಅಧಿಕಾರಿಗಳನ್ನು ಕಟ್ಟಿ ಹಾಕಿದ್ದರು'

Sep 19, 2020, 3:00 PM IST

ಬೆಂಗಳೂರು (ಸೆ. 19): ಸಿದ್ದರಾಮಯ್ಯ 2018 ರಲ್ಲಿ ಸಿಎಂ ಆಗಿದ್ದಾಗ, ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಡ್ರಗ್ಸ್ ಸಿಕ್ಕಿತ್ತು. ಆಗ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಂಡಿದ್ದರೆ ಮುಖ್ಯ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಬಹುದಾಗಿತ್ತು . ಅಲ್ಲದೇ ಡ್ರಗ್ ದಂಧೆ ಕೂಡಾ ಹತೋಟಿಯಲ್ಲಿರುತ್ತಿತ್ತು. ಆದರೆ ಆ ಕೆಲಸವನ್ನು ಮಾಡದೇ ಮೇಲಧಿಕಾರಿಗಳು, ತನಿಖಾಧಿಕಾರಿಗಳ ಕೈ ಕಟ್ಟಿ ಹಾಕಿದ್ದರು ಎಂದು ಗೃಹ ಸಚಿವ ಬೊಮ್ಮಾಯಿ ಆರೋಪಿಸಿದ್ಧಾರೆ. 

ಯುವರಾಜ್‌ಗೆ ಮುಳುವಾಗುತ್ತಾ ಡ್ರಗ್ ಪೆಡ್ಲರ್ ಜೊತೆಗಿನ ನಂಟು?

ಈಗ ಡ್ರಗ್ಸ್ ಮಾಫಿಯಾ ಬಗ್ಗೆ ವಿಚಾರಣೆ ನಡೆಯುತ್ತಿದೆ. ಸಾಕಷ್ಟು ಜನರನ್ನು ಬಂಧಿಸಿದ್ದೇವೆ. ಪೊಲೀಸರ ಕಾರ್ಯವೈಖರಿ ಬಗ್ಗೆ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.