ಪ್ರಸಿದ್ಧ ನಟ ರಾಣಾ ದಗ್ಗುಬಾಟಿ ಪ್ಯಾನ್-ಇಂಡಿಯಾ ಮಟ್ಟದ ನಟರಾಗಿ ಬೆಳೆದಿದ್ದಾರೆ. ಪ್ರಭಾಸ್, ಪವನ್ ಕಲ್ಯಾಣ್, ರಜನೀಕಾಂತ್ ಮುಂತಾದ ಸ್ಟಾರ್‌ಗಳೊಂದಿಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
Image credits: Instagram
ನಿರ್ಮಾಪಕನ ಪುತ್ರ
ಡಿಸೆಂಬರ್ 14, 1984 ರಂದು ಜನಿಸಿದ ರಾಣಾ, ಪ್ರಸಿದ್ಧ ನಿರ್ಮಾಪಕ ಡಿ.ಸುರೇಶ್ ಬಾಬು ಅವರ ಪುತ್ರ.
Image credits: Instagram
ಬಾಹುಬಲಿಯ ಬಲ್ಲಾಳದೇವ
ಲೀಡರ್, ದಮ್ ಮಾರೋ ದಮ್, ಬಾಹುಬಲಿ, ಘಾಜಿ ಮುಂತಾದ ಸಿನಿಮಾಗಳ ಮೂಲಕ ಅವರು ಜನಪ್ರಿಯತೆ ಗಳಿಸಿದರು.
Image credits: Instagram
ಶಾಲಾ ಶಿಕ್ಷಣ
ಚೆನ್ನೈನ ಚೆಟ್ಟಿನಾಡ್ ವಿದ್ಯಾಶ್ರಮ, ಹೈದರಾಬಾದ್ ಪಬ್ಲಿಕ್ ಸ್ಕೂಲ್‌ನಲ್ಲಿ ರಾಣಾ ಓದಿದರು.
Image credits: Instagram
ಕಾಲೇಜು ಶಿಕ್ಷಣ
ಹೈದರಾಬಾದ್‌ನ ಸೇಂಟ್ ಮೇರಿಸ್ ಕಾಲೇಜಿನಿಂದ ಇಂಡಸ್ಟ್ರಿಯಲ್ ಫೋಟೋಗ್ರಫಿಯಲ್ಲಿ ಪದವಿ ಪಡೆದರು.
Image credits: Instagram
ಸ್ಪಿರಿಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ
ರಾಣಾ ಸ್ಪಿರಿಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕರು, 70ಕ್ಕೂ ಹೆಚ್ಚು ಸಿನಿಮಾಗಳಿಗೆ ಅನಿಮೇಷನ್, ವಿಷುಯಲ್ ಎಫೆಕ್ಟ್ಸ್ ಒದಗಿಸಿದ್ದಾರೆ.
Image credits: Instagram
ಸಿನಿಮಾ ನಿರ್ಮಾಪಕ
ಪ್ಯಾನ್ ಇಂಡಿಯಾ ನಟನಾಗಿ ಮಿಂಚುತ್ತಿರುವ ರಾಣಾ ದಗ್ಗುಬಾಟಿ ಸಿನಿಮಾ ನಿರ್ಮಾಪಕರೂ ಹೌದು.
Image credits: Instagram
ಪತ್ನಿ ಮಿಹಿಕಾ ಬಜಾಜ್!
2020 ರಲ್ಲಿ ಮಿಹಿಕಾ ಬಜಾಜ್ ಅವರನ್ನು ವಿವಾಹವಾದರು. ಹೈದರಾಬಾದ್‌ನ ರಾಮಾನಾಯ್ಡು ಸ್ಟುಡಿಯೋಸ್‌ನಲ್ಲಿ ಅವರ ವಿವಾಹ ನೆರವೇರಿತು.
Image credits: Instagram
ಆಸ್ತಿಯ ಮೌಲ್ಯ
ಹಲವು ವರದಿಗಳ ಪ್ರಕಾರ, ನಟ-ನಿರ್ಮಾಪಕ-ಉದ್ಯಮಿ ರಾಣಾ ದಗ್ಗುಬಾಟಿ ಅವರ ನಿವ್ವಳ ಆಸ್ತಿ 142 ಕೋಟಿ ಎಂದು ತಿಳಿದುಬಂದಿದೆ.