ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಮೈಲುಗಲ್ಲು: ಆಸೀಸ್ ಎದುರು ಅಪರೂಪದ ದಾಖಲೆ ನಿರ್ಮಾಣ!

By Naveen Kodase  |  First Published Dec 15, 2024, 9:54 AM IST

ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 100 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ವಿಶ್ವದ 2ನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಈ ಮೂಲಕ ಸಚಿನ್ ತೆಂಡುಲ್ಕರ್ ನಂತರ ಈ ಸಾಧನೆ ಮಾಡಿದ ಎರಡನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.


ಬ್ರಿಸ್ಬೇನ್‌: ಭಾರತದ ತಾರಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 100 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ವಿಶ್ವದ 2ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧ ಆಡುವ 11ರಲ್ಲಿ ಕಾಣಿಸಿಕೊಳ್ಳುವ ಮೂಲಕ ಕೊಹ್ಲಿ ಈ ಮೈಲುಗಲ್ಲು ಸಾಧಿಸಿದರು. ಇದು ಅವರ 28ನೇ ಟೆಸ್ಟ್‌. ಇದಕ್ಕೂ ಮುನ್ನ ಆಸೀಸ್‌ ವಿರುದ್ಧ 49 ಏಕದಿನ, 23 ಟಿ20 ಪಂದ್ಯಗಳನ್ನಾಡಿದ್ದಾರೆ. ಒಟ್ಟಾರೆ 3 ಮಾದರಿಯ 117 ಇನ್ನಿಂಗ್ಸ್‌ಗಳಲ್ಲಿ 50.24ರ ಸರಾಸರಿಯಲ್ಲಿ 5326 ರನ್‌ ಕಲೆಹಾಕಿದ್ದಾರೆ. ಇದರಲ್ಲಿ 17 ಶತಕ, 27 ಅರ್ಧಶತಕಗಳೂ ಒಳಗೊಂಡಿವೆ.

Tap to resize

Latest Videos

ಹೊಸ ವಿಶ್ವ ಚೆಸ್‌ ಚಾಂಪಿಯನ್‌ ಗುಕೇಶ್‌ ದೊಮ್ಮರಾಜುಗೆ ಗರ್ಲ್‌ಫ್ರೆಂಡ್‌ ಇದ್ದಾಳಾ?

ಕೊಹ್ಲಿಗೂ ಮುನ್ನ ಸಚಿನ್‌ ತೆಂಡುಲ್ಕರ್‌ ಆಸ್ಟ್ರೇಲಿಯಾ ವಿರುದ್ಧ 100+ ಪಂದ್ಯವಾಡಿರುವ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದರು. ಅವರು ಒಟ್ಟು 110 ಪಂದ್ಯಗಳನ್ನಾಡಿದ್ದಾರೆ. ವೆಸ್ಟ್‌ಇಂಡೀಸ್‌ ಡೆಸ್ಮೊಂಡ್‌ ಹೇನೆಸ್(97 ಪಂದ್ಯ), ಎಂ.ಎಸ್‌.ಧೋನಿ(91 ಪಂದ್ಯ), ವಿಂಡೀಸ್‌ನ ರಿಚರ್ಡ್ಸ್‌(88) ಈ ಪಟ್ಟಿಯಲ್ಲಿ ನಂತರದ ಸ್ಥಾನಗಳಲ್ಲಿದ್ದಾರೆ.

undefined

ಟೆಸ್ಟ್‌ನಲ್ಲಿ 98 ಸಿಕ್ಸರ್‌: ಗೇಲ್‌ ದಾಖಲೆ ಸರಿಗಟ್ಟಿದ ಟಿಮ್‌ ಸೌಥಿ

ಹ್ಯಾಮಿಲ್ಟನ್‌: ವಿದಾಯದ ಪಂದ್ಯವಾಡುತ್ತಿರುವ ನ್ಯೂಜಿಲೆಂಡ್‌ನ ತಾರಾ ಕ್ರಿಕೆಟಿಗ ಟಿಮ್‌ ಸೌಥಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದವರ ಪಟ್ಟಿಯಲ್ಲಿ ಜಂಟಿ 4ನೇ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್‌ ವಿರುದ್ಧ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಸೌಥಿ 3 ಸಿಕ್ಸರ್‌ ಬಾರಿಸಿದರು. ಈ ಮೂಲಕ ಒಟ್ಟಾರೆ ಟೆಸ್ಟ್‌ನ ಸಿಕ್ಸರ್‌ ಗಳಿಕೆಯನ್ನು 98ಕ್ಕೆ ಹೆಚ್ಚಿಸಿಕೊಂಡರು. ವೆಸ್ಟ್‌ಇಂಡೀಸ್‌ ದಿಗ್ಗಜ ಕ್ರಿಸ್‌ ಗೇಲ್‌ ಕೂಡಾ 98 ಸಿಕ್ಸರ್‌ ಬಾರಿಸಿದ್ದಾರೆ. ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ 133 ಸಿಕ್ಸರ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ನ್ಯೂಜಿಲೆಂಡ್‌ ಮಾಜಿ ನಾಯಕ ಬ್ರೆಂಡಾನ್‌ ಮೆಕಲಂ(107 ಸಿಕ್ಸರ್‌) 2ನೇ, ಆಸ್ಟ್ರೇಲಿಯಾ ಆ್ಯಡಂ ಗಿಲ್‌ಕ್ರಿಸ್ಟ್‌(100 ಸಿಕ್ಸರ್‌) 3ನೇ ಸ್ಥಾನದಲ್ಲಿದ್ದಾರೆ.

click me!