Bharat Jodo Yatra: ಸುವರ್ಣ ನ್ಯೂಸ್​ ರಿಪೋರ್ಟರ್ ಮೇಲೆ ಪೊಲೀಸ್ ದೌರ್ಜನ್ಯ

Oct 6, 2022, 1:23 PM IST

‘ಭಾರತ್ ಜೋಡೋ’ ಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯೊಂದಿಗೆ ಪಕ್ಷದ ವರಿಷ್ಠ ನಾಯಕಿ ಸೋನಿಯಾ ಗಾಂಧಿ ಸಹ ಪಾಲ್ಗೊಂಡಿದ್ದು, ವರದಿಗಾರಿಕೆಗೆ ತೆರಳಿದ್ದ ಸುವರ್ಣನ್ಯೂಸ್ ವರದಿಗಾರರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಪೊಲೀಸರ ಹಲ್ಲೆಯಿಂದ ಸುವರ್ಣ ನ್ಯೂಸ್ ರಿಪೋರ್ಟರ್‌ಗೆ ಗಾಯವಾಗಿದ್ದು, ಪೊಲೀಸರ ದುಂಡಾವರ್ತನೆ ನೋಡಿಯೂ ಮಂಡ್ಯ ಎಸ್​​ಪಿ ಯತೀಶ್ ಸುಮ್ಮನೆ ನಿಂತಿದ್ದರು. ಎಸ್ಪಿ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪಾದಯಾತ್ರೆ ವೇಳೆ ನೂರಾರು ಜನರಿಂದ ತಳ್ಳಾಟ- ನೂಕಾಟ ನಡೆದಿತ್ತು. ಜನರನ್ನು ನಿಯಂತ್ರಿಸಲಾಗದೇ ಮಾಧ್ಯಮ ಪ್ರತಿನಿಧಿಗಳ ಮೇಲೂ ಹಲ್ಲೆ ನಡೆಸಿದ್ದಾರೆ. ಜನರ ಮೇಲಿನ ಸಿಟ್ಟನ್ನು ವರದಿಗಾರರ ಮೇಲೆ ತೀರಿಸಿಕೊಂಡಿದ್ದಾರೆ ಈ ಪೊಲೀಸರು. ವರದಿಗಾರರ ಮೇಲೆ ಮುಗಿಬಿದ್ದ 40ಕ್ಕೂ ಹೆಚ್ಚು ಪೊಲೀಸರು, ವರದಿಗಾರರು, ಕ್ಯಾಮರಾಮನ್​ಗಳನ್ನು ನೂಕಿದ್ದಾರೆ.

ಮಾಧ್ಯಮಗಳ ಮೇಲಿನ ಹಲ್ಲೆ ಖಂಡಿಸಿ ಪಾದಯಾತ್ರೆ ವರದಿಗಾರಿಕೆಯನ್ನು ಪತ್ರಕರ್ತರು ಬಹಿಷ್ಕರಿಸಿದ್ದಾರೆ. ರಿಪೋರ್ಟರ್ ಮೇಲಿನ ಪೊಲೀಸ್ ಹಲ್ಲೆಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಖಂಡಿಸಿದ್ದಾರೆ. 

ಸುರಿಯುವ ಮಳೆ ಮಧ್ಯೆಯೇ ಭಾಷಣ ಮಾಡಿದ ರಾಹುಲ್ ಗಾಂಧಿ