ಪಂಚಾಂಗ: ಇಂದು ದೀಪ ನಮಸ್ಕಾರ ಮಾಡುವುದರಿಂದ ಕಷ್ಟಗಳು ಕರಗಿ, ಬೆಳಕು ಮೂಡುವುದು

Jul 6, 2021, 8:32 AM IST

ಓದುಗರಿಗೆ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಕೃತ್ತಿಕಾ ನಕ್ಷತ್ರ, ಇಂದು ಮಂಗಳವಾರ. ಮಂಗಳವಾರ ಹಾಗೂ ಕೃತ್ತಿಕಾ ನಕ್ಷತ್ರ ಎರಡೂ ಅಗ್ನಿಗೆ ಸಂಬಂಧಿಸಿದ್ದು. ಅಂದರೆ ದೀಪವನ್ನು ಬೆಳಗಬೇಕು. ಅಂದರೆ ದೀಪನಮಸ್ಕಾರ ಮಾಡಬೇಕು. ನಮಗೆಲ್ಲರಿಗೂ ಬೆಳಕು ಬೇಕಾಗಿರುತ್ತದೆ. ಹೀಗಾಗಿ ಇಂದು ಅಮ್ಮನವರಿಗೆ ದೀಪ ನಮಸ್ಕಾರ ಮಾಡುತ್ತಾರೋ, ಎಂಥ ಸಂದಿಗ್ಧ ಪರಿಸ್ಥಿತಿಯನ್ನೂ ಎದುರಿಸುವ ಶಕ್ತಿಯನ್ನು ಕರುಣಿಸುತ್ತಾಳೆ. 

ದಿನ ಭವಿಷ್ಯ: ಈ ರಾಶಿಯವರಿಗೆ ದಾಂಪತ್ಯದಲ್ಲಿ ಎಚ್ಚರಿಕೆ ಬೇಕು!