ಬಾಯಲ್ಲೇ ಮೇಕೆಯ ಕತ್ತು ಸೀಳಿದ ಪೂಜಾರಿ; ವಿಡಿಯೋ ವೈರಲ್

May 7, 2019, 1:57 PM IST

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ‌ ಜಾತ್ರೆಯಲ್ಲಿ ಪೂಜಾರಿಯೊಬ್ಬರು ಮೇಕೆಯ ಕತ್ತು ಸೀಳಿ ಹಸಿ ಮಾಂಸ ತಿನ್ನುತ್ತಿರುವ ದೃಶ್ಯ ವೈರಲ್ ಆಗಿದೆ. ದೇವಿಯ ಜಾತ್ರೆಗೆ ಆಗಮಿಸಿದ ಭಕ್ತರ ಎದುರು ಪೂಜಾರಿ ಈ ರೀತಿ ಮಾಡಿದ್ದಾರೆ. ಇಂತಹ ಪೈಶಾಚಿಕ ಆಚರಣೆಗೆ ಸಾರ್ವಜನಿಕ ಆಕ್ಷೇಪ ವ್ಯಕ್ತವಾಗಿದೆ.