Aug 26, 2019, 4:57 PM IST
ಬೆಂಗಳೂರು (ಆ.26): ಸಚಿವ ಸ್ಥಾನ ವಂಚಿತರ ಹಠಕ್ಕೆ ರೋಸಿ ಹೋಗಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಕೊನೆಗೂ ಇಬ್ಬರನ್ನು ಮಂತ್ರಿ ಮಾಡಲು ಮುಂದಾಗಿದ್ದಾರೆ. ನಾಳೆ (ಮಂಗಳವಾರ) ಅಥವಾ ಬುಧವಾರ ಮತ್ತಿಬ್ಬರು ಸಚಿವ ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ. ಇದರ ನಡುವೆ, ಮತ್ತೊಬ್ಬ ಶಾಸಕ, ತನ್ನ ಹೆಸರನ್ನೂ ಹೊಸ ಪಟ್ಟಿಯಲ್ಲಿ ಸೇರಿಸಿ ಎಂದು ದುಂಬಾಲು ಬಿದ್ದಿದ್ದಾರೆ.