ಮೊದಲ ಮಹಿಳಾ ಮುಸ್ಲಿಂ ಶಿಕ್ಷಕಿ ಫಾತಿಮಾ ಶೇಖ್: ನಿಮಗೆ ತಿಳಿಯದ ವಿಚಾರಗಳು

Aug 31, 2019, 12:58 PM IST

ಭಾರತದ ಮೊದಲ ಮಹಿಳಾ ಶಿಕ್ಷಕಿ ಹಾಗೂ ಹೆಣ್ಣು ಮಕ್ಕಳಿಗಾಗಿ ಶಾಲೆ ಆರಂಭಿಸಿದ ಮೊದಲ ವ್ಯಕ್ತಿ ಸಾವಿತ್ರಿಬಾಯಿ ಪುಲೆ ಎಂಬ ವಿಚಾರ ಎಲ್ಲರಿಗೂ ತಿಳಿದಿರುವಂತಹುದ್ದೇ. ಆದರೆ ಸಾವಿತ್ರಿಬಾಯಿ ಪುಲೆ ಹಾಗೂ ಜ್ಯೋತಿಬಾ ಪುಲೆಗೆ ಈ ಸಮಾಜಮುಖಿ ಕಾರ್ಯದಲ್ಲಿ ಕೈಜೋಡಿಸಿದ ಮತ್ತೊಬ್ಬ ಮಹಿಳೆ ದೇಶದ ಮೊದಲ ಮಹಿಳಾ ಮುಸ್ಲಿಂ ಶಿಕ್ಷಕಿ ಫಾತಿಮಾ ಶೇಖ್. ಫಾತಿಮಾ ಕೊಡುಗೆ ಇಲ್ಲದೇ ಹೆಣ್ಣುಮಕ್ಕಳ ಶಾಲೆಯ ಕನಸು ಸಾಕಾರಗೊಳ್ಳುತ್ತಿರಲಿಲ್ಲ. ಆದರೆ ಇವರ ಬಗ್ಗೆ ತಿಳಿದಿರುವುದು ಕೆಲವರಿಗಷ್ಟೇ. ಹೆಣ್ಣುಮಕ್ಕಳ ಶಿಕ್ಷಣ ಕ್ರಾಂತಿಗೆ ಕೊಡುಗೆ ನೀಡಿದ ಫಾತಿಮಾ ಶೇಖ್ ಕುರಿತು ನಿಮಗೆ ತಿಳಿಯದ ವಿಚಾರಗಳು