ಬೆಂಗಳೂರಿನ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಆಯೋಜಿಸಿದ್ದ ನಮ್ಮ ಬೆಂಗಳೂರು ಚಾಲೆಂಜ್‌ನಲ್ಲಿ 5 ಸಂಸ್ಥೆಗಳು ವಿಜೇತರಾಗಿ ತಲಾ 10 ಲಕ್ಷ ರೂ. ಬಹುಮಾನ ಪಡೆದಿವೆ. ನವೆಂಬರ್‌ನಲ್ಲಿ ಪ್ರಾರಂಭವಾದ ಈ ಚಾಲೆಂಜ್‌ಗೆ 600ಕ್ಕೂ ಹೆಚ್ಚು ಜನರು ಮತ್ತು ಸಂಸ್ಥೆಗಳು ನೋಂದಾಯಿಸಿಕೊಂಡಿದ್ದವು.
ಬೆಂಗಳೂರು (ಡಿ.15): ಬೆಂಗಳೂರಿನ ಸಮಸ್ಯೆಗಳಿಗೆ ಉತ್ತಮ ಪರಿಹಾರ ನೀಡುವಂತೆ ಆಯೋಜನೆ ಮಾಡಲಾಗಿದ್ದ ನಮ್ಮ ಬೆಂಗಳೂರು ಚಾಲೆಂಜ್‌ಗೆ ಉತ್ತಮ ಐಡಿಯಾಗಳನ್ನು ನೀಡಿದ 5 ಸಂಸ್ಥೆಗಳಿಗೆ ತಲಾ 10 ಲಕ್ಷ ರೂ.ಗಳನ್ನು ನೀಡಿ ಅಭಿನಂದಿಸಲಾಗಿದೆ.
ಬಿಎಲ್‌ಆರ್ ಹಬ್ಬದಲ್ಲಿ ನಡೆದ ಬೆಂಗಳೂರು ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ ಫ್ಯೂಚರ್ಸ್ ಕಾನ್ಫರೆನ್ಸ್‌ನಲ್ಲಿ ಈ ಘೋಷಣೆ ಮಾಡಲಾಗಿದೆ. ಅನ್‌ಬಾಕ್ಸಿಂಗ್ ಬೆಂಗಳೂರು ಹಾಗೂ ನಿಖಿಲ್ ಕಾಮತ್ ಅವರ ಡಬ್ಲ್ಯೂಟಿ ಫಂಡ್ ಸಹಯೋಗದೊಂದಿಗೆ ನಡೆದ 'ನಮ್ಮ ಬೆಂಗಳೂರು ಚಾಲೆಂಜ್' ಅನ್ನು 5 ಜನ ಗೆದ್ದಿದ್ದಾರೆ. ಬೆಂಗಳೂರು ಸಮಸ್ಯೆಗೆ ಪರಿಹಾರ ನೀಡಿ ಎಂದು 'ನಮ್ಮ ಬೆಂಗಳೂರು ಚಾಲೆಂಜ್' ಅನ್ನು ಆಯೋಜನೆ ಮಾಡಲಾಗಿತ್ತು. ವಿಭಿನ್ನ ಆಲೋಚನೆಗಳಿಗೆ ತಲಾ 10 ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡಲಾಗಿತ್ತು. Unboxing ಬೆಂಗಳೂರು ಫೌಂಡೇಶನ್ ಮತ್ತು ನಿಖಿಲ್ ಕಾಮತ್ ಅವರ WTFund ಇದೀಗ ನಮ್ಮ ಬೆಂಗಳೂರು ಚಾಲೆಂಜ್‌ನ 5 ವಿಜೇತ ತಂಡಗಳಿಗೆ ತಲಾ 10 ಲಕ್ಷ ರೂ. ಬಹುಮಾನ ನೀಡಲಾಯಿತು.
ಕಳೆದ ನವೆಂಬರ್ ತಿಂಗಳಲ್ಲಿ ಪ್ರಾರಂಭವಾದ ನಮ್ಮ ಬೆಂಗಳೂರು ಚಾಲೆಂಜ್‌ಗೆ ಸುಮಾರು 600 ಜನರು ಹಾಗೂ ಸಂಸ್ಥೆಗಳಿಂದ ರಿಜಿಸ್ಟ್ರೇಶನ್ ಆಗಿತ್ತು. ಬಳಿಕ Unboxing ಬೆಂಗಳೂರು ಫೌಂಡೇಶನ್ ಮತ್ತು WTFund ಕೊನೆಯದಾಗಿ 16 ಬೆಸ್ಟ್ ಐಡಿಯಾಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು. ಬಳಿಕ 8 ತಂಡವನ್ನು ಆಯ್ಕೆ ಮಾಡಿ ಕೊನೆಯದಾಗಿ 5 ತಂಡಗಳಿಗೆ ಅವಾರ್ಡ್ ನೀಡಲಾಗಿದೆ. 5 ಬೆಸ್ಟ್ ಐಡಿಯಾಗಳನ್ನ ನೀಡಿದ ತಂಡಕ್ಕೆ ತಲಾ 10 ಲಕ್ಷ ರೂ. ನೀಡಲಾಗಿದೆ.
ಇದನ್ನೂ ಓದಿ: ಬೆಂಗಳೂರು ನಂ.2, ನಿತಿನ್ ಗಡ್ಕರಿ ವರದಿಯಿಂದ ಸಿಲಿಕಾನ್ ಸಿಟಿ ಜನರಲ್ಲಿ ಹೆಚ್ಚಿದ ಆತಂಕ!
undefined
ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೊಂದು ‘ಎಲೆಕ್ಟ್ರಾನಿಕ್ ಸಿಟಿ’ಗೆ ಸಿದ್ಧತೆ: 1000 ಎಕರೆಯಲ್ಲಿ ‘ಸ್ವಿಫ್ಟ್ ಸಿಟಿ’ ನಿರ್ಮಾಣ
ಈ ಕಾರ್ಯಕ್ರಮದ ಮಾತನಾಡಿದ ಜೀರೋಧಾದ ಸಹ ಸಂಸ್ಥಾಪಕ ನಿಖಿಲ್ ಕಾಮತ್, ಬೆಂಗಳೂರು ನನಗೆ ತುಂಬಾ ನೀಡಿದೆ. ಅದರ ಪ್ರತಿಯಾಗಿ ಬೆಂಗಳೂರಿಗೆ ಏನಾದರೂ ನೀಡುವುದು ನನ್ನ ಮಾರ್ಗವಾಗಿದೆ. ಈ ಚಾಲೆಂಜ್ ಈ ನಗರದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಜನರನ್ನು ಒಟ್ಟುಗೂಡಿಸುತ್ತದೆ. ಇದರಲ್ಲಿ ಭಾಗವಹಿಸಿದ ಎಲ್ಲರಿಗೂ ದೊಡ್ಡ ಧನ್ಯವಾದಗಳು. ಈ ಆಲೋಚನೆಗಳು ಹೇಗೆ ವಿಕಸನಗೊಳ್ಳುತ್ತವೆ ಮತ್ತು ಮುಂಬರುವ ವರ್ಷಗಳಲ್ಲಿ ಬದಲಾವಣೆಯನ್ನು ಮಾಡುತ್ತವೆ ಎಂಬುದನ್ನು ನೋಡಲು ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ ಎಂದರು.