ಯೂಟ್ಯೂಬ್‌ನಲ್ಲಿ ರೆಸಿಪಿ ಸೇರಿ ಇತರ ವಿಡಿಯೋಗಳಿಂದ ನಿತಿನ್ ಗಡ್ಕರಿ ಸಂಪಾದಿಸುವ ಹಣವೆಷ್ಟು?

By Chethan Kumar  |  First Published Dec 15, 2024, 6:26 PM IST

ಕೇಂದ್ರ ಸಚಿವ ನಿತಿನ್ ಗಡ್ಕರಿ ಯೂಟ್ಯೂಬ್ ಮೂಲಕವೇ ಸಕ್ರಿಯರಾಗಿದ್ದರೆ. ಯೂಟ್ಯೂಬ್‌ನಲ್ಲಿ ರೆಸಿಪಿ, ಸಂದರ್ಶನ, ಭಾಷಣ ಸೇರಿದಂತೆ ಹಲವು ವಿಡಿಯೋಗಳನ್ನು ಪೋಸ್ಟ್ ಮಾಡಿ ಬರೋಬ್ಬರಿ 25 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಯೂಟ್ಯೂಬ್ ಮೂಲಕ ನಿತಿನ್ ಗಡ್ಕರಿ ಸಂಪಾದಿಸುವ ಹಣವೆಷ್ಟು? ಈ ಕುರಿತು ಗಡ್ಕರಿ ಮಾತನಾಡಿದ್ದಾರೆ.


ನವದೆಹಲಿ(ಡಿ.15) ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಭಾರತದ ರಸ್ತೆಗಳ ಚಿತ್ರಣ ಬದಲಿಸಿದ್ದಾರೆ. ಅತ್ಯುತ್ತಮ ಗುಣಮಟ್ಟದ ರಸ್ತೆ, ದೇಶದ ಮೂಲೆ ಮೂಲೆಗೂ ಸಂಪರ್ಕ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಎಕ್ಸ್‌ಪ್ರೆಸ್ ಹೆದ್ದಾರಿಗಳ ಮೂಲಕ ಹೊಸ ರಸ್ತೆ ಸೌಲಭ್ಯವನ್ನು ಕಲ್ಪಿಸಿದ್ದಾರೆ. ದೇಶದ ಬಹುತೇಕ ರಾಜ್ಯದಲ್ಲಿ ನಿತಿನ್ ಗಡ್ಕರಿ ಸಚಿವಾಲಯದ ಯೋಜನೆಗಳು ನಡೆಯತ್ತಿದೆ. ಸಾವಿರಾರು ಕೋಟಿ ರೂಪಾಯಿಗಳ ಯೋಜನಯೆನ್ನು ನಿತಿನ್ ಗಡ್ಕರಿ ಕೈಗೆತ್ತುಕೊಂಡುು ನಿರ್ವಹಿಸುತ್ತಿದ್ದಾರೆ. ಹೀಗಾಗಿ ನಿತಿನ್ ಗಡ್ಕರಿ ಹೆಚ್ಚು ಬ್ಯೂಸಿ ಹಾಗೂ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದಾರೆ. ಇದರ ನಡುವೆ ನಿತಿನ್ ಗಡ್ಕರಿ ಯೂಟ್ಯೂಬ್‌ನಲ್ಲೂ ಸಕ್ರಿಯವಾಗಿದ್ದಾರೆ. ಇಷ್ಟೇ ಅಲ್ಲ ತಮ್ಮ ವಿಡಿಯೋಗಳ ಮೂಲಕ ಯೂಟ್ಯೂಬ್‌ನಿಂದಲೂ ನಿತಿನ್ ಗಡ್ಕರಿ ಹಣ ಗಳಿಸುತ್ತಿದ್ದಾರೆ.

ಟೈಮ್ಸ್ ನೌ ಸುದ್ದಿ ವಾಹನಿ ಆಯೋಜಿಸಿದ ಇಂಡಿಯಾ ಎಕಾನಮಿಕ್ ಕಾನ್‌ಕ್ಲೇವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಿತಿನ್ ಗಡ್ಕರಿ ದೇಶದ ಆರ್ಥಿಕ ಕಾರಿಡಾರ್, ಸಾರಿಗೆ ಸಂಪರ್ಕ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ತಮ್ಮ ಯೂಟ್ಯೂಬ್ ಚಾನೆಲ್, ಅದರಿಂದ ಬರುತ್ತಿರುವ ಆದಾಯದ ಕುರಿತು ಮಾತನಾಡಿದ್ದಾರೆ. 

Tap to resize

Latest Videos

ಬೆಂಗಳೂರು ನಂ.2, ನಿತಿನ್ ಗಡ್ಕರಿ ವರದಿಯಿಂದ ಸಿಲಿಕಾನ್ ಸಿಟಿ ಜನರಲ್ಲಿ ಹೆಚ್ಚಿದ ಆತಂಕ!

ಯೂಟ್ಯೂಬ್ ಕುರಿತು ಪ್ರಶ್ನೆಗೆ ಉತ್ತರಿಸಿದ ನಿತಿನ್ ಗಡ್ಕರಿ, ನನಗೆ ಯೂಟ್ಯೂಬ್‌ನಲ್ಲಿ 25 ಕೋಟಿ ಫಾಲೋವರ್ಸ್ ಇದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಗೋಲ್ಡನ್ ಬಟನ್ ಅವಾರ್ಡ್ ಕೂಡ ನೀಡಿದೆ ಎಂದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಯೂಟ್ಯೂಬ್ ಹಲವು ವಿಚಾರವನ್ನು ಕಲಿಸಿದೆ ಎಂದಿದ್ದಾರೆ. ಈ ಪೈಕಿ ನಿತಿನ್ ಗಡ್ಕರಿ ಹೇಳಿದ ಅಡುಗೆ ರೆಸಿಪಿ ವಿಡಿಯೋ ಬಾರಿ ವೈರಲ್ ಆಗಿತ್ತು. ಹಲವರು ಈ ರೆಸಿಪಿ ಮನೆಯಲ್ಲಿ ಪ್ರಯೋಗ ಮಾಡಿ ನೋಡಿದ್ದಾರೆ. 

undefined

ನಿತಿನ್ ಗಡ್ಕರಿ ಯೂಟ್ಯೂಬ್‌ನಿಂದ ಎಷ್ಟು ಸಂಪಾದಿಸುತ್ತಾರೆ. ಈ ಕುರಿತು ಉತ್ತರಿಸಿದ ನಿತಿನ್ ಗಡ್ಕರಿ, ಯೂಟ್ಯೂಬ್‌ನಿಂದ ಬಂದ ಹಣವನ್ನು ದೇಣಿಗೆ ನೀಡುತ್ತೇನೆ. ಸಾಮಾಜಿಕ ಕಾರ್ಯಗಳಿಗೆ ಬಳಸಿಕೊಳ್ಳುತ್ತೇನೆ ಎಂದಿದ್ದಾರೆ. ನಾಗ್ಪುರದಲ್ಲಿ ಶೇಕಡಾ 95 ರಷ್ಟು ಸಾಮಾಜಿಕ ಕೆಲಸ ಕಾರ್ಯ ಮಾಡುತ್ತೇನೆ. ನನ್ನ ಸಾಮಾಜಿಕ ಪ್ರಾಜೆಕ್ಟ್‌ಗಳಿಂದ 2.5 ಕೋಟಿ ರೂಪಾಯಿ ವ್ಯವಹಾರ ನಡೆಯುತ್ತದೆ. ಬುಡಕಟ್ಟು ಹಾಗೂ ಕೃಷಿ ಕ್ಷೇತ್ರದಲ್ಲಿ 15,000 ಮಂದಿಗೆ ಉದ್ಯೋಗ ನೀಡಿದ್ದೇನೆ. ಇವೆಲ್ಲವೂ ನನ್ನ ಸೋಶಿಯಲ್ ವರ್ಕ್ ಅಡಿಯಲ್ಲಿ ನಡೆಯತ್ತಿದೆ ಎಂದಿದ್ದಾರೆ.

ಯೂಟ್ಯೂಬ್‌ನಿಂದ ನಿತಿನ್ ಗಡ್ಕರಿ ಎಷ್ಟು ಸಂಪಾದಿಸುತ್ತಿದ್ದಾರೆ ಅನ್ನೋ ಅಂಕಿ ಸಂಖ್ಯೆ ಹೇಳಿಲ್ಲ. ಆದರೆ ನಿತಿನ್ ಗಡ್ಕರಿ ಸೋಶಿಯಲ್ ವರ್ಕ್‌ಗಾಗಿ ಸುಮಾರು 2.5 ಕೋಟಿ ರೂಪಾಯಿ ತೆಗೆದಿಡುತ್ತಿದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗಿದೆ. ಇಷ್ಟು ಹಣ ಯೂಟ್ಯೂಬ್‌ನಿಂದಲೇ ಬಂದಿರುವುದಾ? ಅಥವಾ ಇತರ ಕೆಲಸ ಕಾರ್ಯಗಳಿಂದಲೂ ಹಣ ಹೊಂದಿಸಿದ್ದಾರಾ ಅನ್ನೋ ಕುರಿತು ಗಡ್ಕರಿ ಸ್ಪಷ್ಟತೆ ನೀಡಿಲ್ಲ.

ನಿತಿನ್ ಗಡ್ಕರಿ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಹಲವು ವಿಡಿಯೋ ಪೋಸ್ಟ್ ಮಾಡುತ್ತಾರೆ. ಬಹುತೇಕ ತಮ್ಮ ಪ್ರಾಜೆಕ್ಟ್‌ಗಳು, ಭಾಷಣ, ಮಾಧ್ಯಮ ಸಂದರ್ಶನ ಸೇರಿದಂತೆ ಇತರ ಕೆಲಸ ಕಾರ್ಯಗಳ ವಿಡಿಯೋಗಳೇ ಹೆಚ್ಚಿದೆ. ಹೊಸ ರಸ್ತೆಗಳ ವಿಡಿಯೋ, ಯೋಜನೆಗಳ ಮಾಹಿತಿ ಸೇರಿದಂತೆ ಹಲವು ವಿಚಾರಗಳನ್ನು ನಿತಿನ್ ಗಡ್ಕರಿ ಯೂಟ್ಯೂಬ್ ಮೂಲಕ ಹಂಚಿಕೊಂಡಿದ್ದಾರೆ. 

ಇದೇ ವೇಳೆ ಮೋದಿ ಸರ್ಕಾರ 36 ಗ್ರೀನ್ ಹೆದ್ದಾರಿ ನಿರ್ಮಾಣ ಮಾಡುತ್ತಿರುವುದಾಗಿ ಹೇಳಿದ್ದಾರೆ. ಚೀನಾದಲ್ಲಿ ಸಾರಿಗೆ ಸಂಪರ್ಕ, ಸರಕು ಸಾಗಾಟಗಳಿಗೆ ಶೇಕಡಾ 8 ರಷ್ಟು ಖರ್ಚಾಗುತ್ತಿದೆ. ಆದರೆ ಇದೇ ಖರ್ಚು ವೆಚ್ಚ ಭಾರತದಲ್ಲಿ ಶೇಕಡಾ 14 ರಿಂದ 16. ಮುಂದಿನ 2 ವರ್ಷದಲ್ಲಿ ಸಾರಿಗೆ ವೆಚ್ಚ ಒಂದಂಕಿಗೆ ಬರಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ

click me!