ಡಾ. ರಾಜ್‌ 16ನೇ ಪುಣ್ಯತಿಥಿ: ಅಭಿಮಾನಿಗಳ ಪ್ರೀತಿ, ಅಭಿಮಾನದ ಮುಂದೆ ನಾವೇನೂ ಅಲ್ಲ: ಶಿವಣ್ಣ

Apr 13, 2022, 2:07 PM IST

ಬೆಂಗಳೂರು (ಏ. 13): ವರನಟ ಡಾ. ರಾಜ್‌ಕುಮಾರ್‌ (Dr Rajkumar) ಅವರ 16ನೇ ವರ್ಷದ ಪುಣ್ಯ ಸ್ಮರಣೆಯ (Death Anniversary) ಅಂಗವಾಗಿ ರಾಜ್‌ ಕುಟುಂಬದಿಂದ ಕಂಠೀರವ ಸ್ಟುಡಿಯೋದಲ್ಲಿ (Kanteerava Studio) ವಿಶೇಷ ಪೂಜೆ ನಡೆಸಲಾಯಿತು. ಈ ಸಂದರ್ಭದಲ್ಲಿ ಅಭಿಮಾನಿಗಳು (Fans) ಕೂಡ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.

KGF Chapter 2: ರಿಲೀಸ್‌ಗೂ ಮುನ್ನ 'ಕೆಜಿಎಫ್' ಗಳಿಸಿದ ಹಣವೆಷ್ಟು ಗೊತ್ತಾ?

 ‘ಅಪ್ಪಾಜಿ ಅಗಲಿ ಇಂದಿಗೆ 16 ವರ್ಷ. ಇಷ್ಟುವರ್ಷ ಆದರೂ ಜನರು ನಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ ಕಡಿಮೆ ಆಗಿಲ್ಲ. ಅಭಿಮಾನಿಗಳ ಈ ಪ್ರೀತಿ ಮತ್ತು ಅಭಿಮಾನಕ್ಕೆ ನಾವು ಬೆಲೆ ಕಟ್ಟಲಾಗದು. ಜನರ ಅಭಿಮಾನದ ಮುಂದೆ ನಾವು ಏನೂ ಅಲ್ಲ’ ಎಂದು ಶಿವರಾಜ್‌ಕುಮಾರ್ ( Shivarajkumar) ಭಾವುಕರಾದರು. 

 ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಯುವ ರಾಜ್‌ಕುಮಾರ್‌ ಸೇರಿದಂತೆ ರಾಜ್‌ಕುಮಾರ್‌ ಕುಟುಂಬದ ಎಲ್ಲರು ಕಂಠೀರವ ಸ್ಟುಡಿಯೋಗೆ ಆಗಮಿಸಿ ರಾಜ್‌ ಸ್ಮಾರಕಕ್ಕೆ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಪುನೀತ್‌ರಾಜ್‌ಕುಮಾರ್‌ ಅವರ ಸಮಾಧಿಗೂ ಪೂಜೆ ಸಲ್ಲಿಸಿದ ರಾಜ್‌ ಕುಟುಂಬ ಭಾವುಕರಾದರು.