ಟ್ರಾಫಿಕ್ ಜಾಮಲ್ಲಿ ಸಿಲುಕಿದಾಗ ನೀವ್ ಏನ್ ಮಾಡ್ಬೇಕು..?

Oct 16, 2019, 3:32 PM IST

ನೀವು ಆಫೀಸ್‌ಗೆ ಹೋಗುವವರಾಗಿದ್ದು,  ಹೆಚ್ಚಿನ ಸಮಯವನ್ನು ಪ್ರಯಾಣದಲ್ಲಿಯೇ ಕಳೆಯುತ್ತೀರಿ ಎಂದಾದರೆ, ಟ್ರಾಫಿಕ್ ಜಾಮ್ ಬಿಸಿ ತಟ್ಟಿರುತ್ತದೆ. ಆದರೆ, ಈ ಸಮಯವನ್ನೂ ಅತ್ಯಂತ ಅರ್ಥಪೂರ್ಣವಾಗಿ ವಿನಿಯೋಗಿಸಿಕೊಳ್ಳಬಹುದು. ಅದಕ್ಕೆ ಇಲ್ಲಿವೆ ಕೆಲವು ಟಿಪ್ಸ್...

ಟ್ರಾಫಿಕ್ ನಲ್ಲಿ ನೀವೇನು ಮಾಡಬೇಕು?

* ರೇಡಿಯೋ ಆನ್ ಮಾಡಿ. ನಿಮಗಿಷ್ಟವಾದ ಸಂಗೀತ ಅಥವಾ ಇತರೆ ಕಾರ್ಯಕ್ರಮಗಳನ್ನು ಕೇಳಿ. ನಿಮ್ಮನ್ನು ನೀವೇ ರಂಜಿಸಿಕೊಳ್ಳಲು ಇದು ಬೆಸ್ಟ್ ವೇ.  ನಿಮ್ಮ ಪೋನ್ ಅಥವಾ ಪೆನ್ ಡ್ರೈವ್ ನಲ್ಲಿರೋ ಹಳೇ ಹಾಡು ಅಥವಾ ನಿಮ್ಮಿಷ್ಟದ ಭಾಷಣವನ್ನು ಕೇಳಿ ಕೊಳ್ಳಿ. ಜ್ಞಾನ ಹೆಚ್ಚಾಗುವುದರೊಂದಿಗೆ ಮನಸ್ಸು ಪ್ರಫುಲ್ಲಗೊಳ್ಳುವ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಆದರೆ, ಸಾರ್ವಜನಿಕ ಸಾರಿಗೆಯಲ್ಲಿದ್ದರೆ ಇನ್ನೊಬ್ಬರಿಗೆ ತೊಂದರೆಯಾಗದಂತೆ ವಾಲ್ಯೂಮ್ ಕಡಿಮೆ ಮಾಡಿಕೊಳ್ಳಿ.

* ದಿನದ ಅಂತ್ಯ ಅಥವಾ ವಾರದೊಳಗೆ ನೀವು ಮುಗಿಸಬೇಕಾದ ಕಾರ್ಯಗಳ ಪಟ್ಟಿ ಮಾಡಿಕೊಳ್ಳಿ. ಅದಕ್ಕೆ ಅಗತ್ಯದಷ್ಟು ಸಮಯವನ್ನು ಸಾಧ್ಯವಾದಷ್ಟು ಟ್ರಾಫಿಕ್‌ನಲ್ಲಿಯೇ ಮುಗಿಸಿಕೊಳ್ಳಿ. ಯಾವುದೂ ಮರೆಯದಂತೆ ಎಚ್ಚರವಾಗಿರಿ.

* ವೇಗದ ಜೀವನದಲ್ಲಿ ನಾವು ಸಾಮಾನ್ಯವಾಗಿ ನಮ್ಮ ಹೆತ್ತವರು ಹಾಗೂ ಹಳೇ ಸ್ನೇಹಿತರೊಂದಿಗೆ ಮಾತನಾಡಲು ಸಮಯವನ್ನು ಹೊಂದಿಸಿಕೊಳ್ಳುವುದಿಲ್ಲ. ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿ ಹಾಕಿ ಕೊಂಡಾಗ ಇದಕ್ಕೆಲ್ಲ ಸಮಯವನ್ನು ವಿನಿಯೋಗಿಸಿಕೊಳ್ಳಬಹುದು. ಆದರೆ, ಡ್ರೈವ್ ಮಾಡುವಾಗ ಇಂಥ ಕೆಲಸದಲ್ಲಿ ತೊಡಗಬೇಡಿ.

ಇದೇನು ಅಚ್ಚರಿ! ದೆಹಲಿಯಲ್ಲಿ ಟಾಯ್ಲೆಟ್ ಗಾಗಿಯೇ ಇದೆ ಒಂದು ಮ್ಯೂಸಿಯಂ!...

*  ನಿಮ್ಮ ಪ್ರಯಾಣದೊಂದಿಗೆ ಒಂದೊಳ್ಳೆ ಪುಸ್ತಕ ಸದಾ ನಿಮ್ಮೊಟ್ಟಿಗಿರಲಿ.  ಸುಮಾರು 10 ನಿಮಿಷ ಟ್ರಾಫಿ‌ಕ್‌ನಲ್ಲಿ ನಿಲ್ಲಬೇಕೆಂದಾದರೆ ತಪ್ಪದೇ ಕೈಯಲ್ಲಿರುವ ಪುಸ್ತಕಗಳ ಕೆಲವು ಪುಟಗಳನ್ನು ಮುಗಿಸಿ. ಆ ರೀತಿಯೇ ಜೀವನದಲ್ಲಿ ಇದೇ ಸಮಯದಲ್ಲಿ ಹಲವು ಪುಸ್ತಕಗಳನ್ನು ಓದಿ ಮುಗಿಸಬಹುದು.

* ಪಕ್ಕದ ವಾಹನದಲ್ಲಿ ನಿಂತಿರುವ  ವ್ಯಕ್ತಿಯೊಂದಿಗೆ ಮಾತನಾಡಿ. ಉಭಯ ಕುಶಲೋಪರಿ ನಡೆಸಿ. ಇದರಿಂದ ಮನಸ್ಸು ಉಲ್ಲಾಸಿತಗೊಳ್ಳುತ್ತದೆ. ಯಾರಿಗೆ ಗೊತ್ತು ಯಾವ ಹುತ್ತದಲ್ಲಿ ಯಾವ ಹಾವಿರುತ್ತೆ ಅಂತ. ನಿಮಗೆ ಅವರೇ ಕಷ್ಟ ಕಾಲದಲ್ಲಿ ಕಾಪಾಡುವ ಉತ್ತಮ ಸ್ನೇಹಿತನಾಗಬಹುದು.