ಕೊರೋನಾ ಕಾಟ: ಸಲೂನ್‌ನಲ್ಲಿ ಡಬಲ್‌ ರೇಟ್‌, ಗ್ರಾಹಕನ ಜೇಬಿಗೆ ಕತ್ತರಿ..!

Jun 7, 2020, 11:38 AM IST

ಬೆಂಗಳೂರು(ಜೂ.07): ಕೊರೋನಾ ನಂತರ ಜೀವನ ಬಲು ದುಬಾರಿಯಾಗಿದೆ.ಹೌದು, ಇದರಿಂದ ಜನಸಾಮಾನ್ಯರು ಬಹಳಷ್ಟು ತೊಂದರೆಗಳನ್ನ ಅನುಭವಿಸುತ್ತಿದ್ದಾರೆ. ಕೊರೋನಾ ಹೆಸರಲ್ಲಿ ಹೆಚ್ಚುವರಿ ಟ್ಯಾಕ್ಸ್‌ ಬೀಳುತ್ತಿದೆ. ಇನ್ನು ಕಟಿಂಗ್‌ ಶಾಪ್‌ಗಳಲ್ಲೂ ಕೂಡ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಇಲ್ಲೂ ಕೂಡ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ. 

ನಾಳೆಯಿಂದ ಹೊಸ ದುನಿಯಾ: ಮಾಲ್‌ಗೆ ಹೋಗೋದಾದ್ರೆ ಏನೇನ್ ನಿಯಮ ಪಾಲಿಸ್ಬೇಕು?

ಸರ್ಕಾರದ ಆದೇಶಗಳನ್ನ ಪಾಲಿಸುವುದಕ್ಕಾಗಿ ಕಟಿಂಗ್‌ ಶಾಪ್‌ಗಳಲ್ಲಿ ಗ್ರಾಹಕರಿಗೆ ಹೆಚ್ಚಿನ ಹೊರೆ ಹಾಕಲಾಗುತ್ತಿದೆ. ಕೊರೋನಾದಿಂದ ಸೇಫ್‌ ಆಗಲು ಹೆಚ್ಚುವರಿ ಟ್ಯಾಕ್ಟ್‌ ಕಟ್ಟಲೇಬೇಕಾದಂತೆ ಅನಿವಾರ್ಯತೆ ಜನಸಾಮಾನ್ಯರಿಗೆ ಎದುರಾಗಿದೆ.