ನಾಳೆಯಿಂದ ಹೊಸ ದುನಿಯಾ: ಮಾಲ್‌ಗೆ ಹೋಗೋದಾದ್ರೆ ಏನೇನ್ ನಿಯಮ ಪಾಲಿಸ್ಬೇಕು?
ಹೋಟೆಲ್, ಶಾಪಿಂಗ್, ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಕೇಂದ್ರಗಳು ಓಪನ್|ಷರತ್ತುಗಳನ್ನ ಪಾಲನೆ ಮಾಡಿಕೊಂಡು ಅಂಗಡಿಗಳನ್ನ ತೆರೆಯಬಹುದು| ಶಾಪಿಂಗ್ ಮಾಲ್‌ನಲ್ಲಿ ಮಕ್ಕಳಿಗೆ ಅಟದ ಸ್ಥಳ ಹಾಗೂ ಮಲ್ಟಿಪ್ಲೆಕ್ಸ್‌ಗಳಿಗೆ ಅವಕಾಶ ಇಲ್ಲ|
ಬೆಂಗಳೂರು(ಜೂ.07): ರಾಜ್ಯದಲ್ಲಿ ನಾಳೆಯಿಂದ(ಸೋಮವಾರ) ಹೋಟೆಲ್, ಶಾಪಿಂಗ್, ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಕೇಂದ್ರಗಳು ಓಪನ್ ಅಗಲಿವೆ. ಅದರೆ, ಕೆಲವೊಂದು ಷರತ್ತುಗಳನ್ನ ಪಾಲನೆ ಮಾಡಿಕೊಂಡು ತೆರೆಯಬಹುದಾಗಿದೆ.
24 ಗಂಟೆಯೊಳಗೆ ಬೆಂಗಳೂರಲ್ಲಿ ಕೊರೊನಾಗೆ ಇಬ್ಬರ ಸಾವು
ಇನ್ನು ಶಾಪಿಂಗ್ ಮಾಲ್‌ನಲ್ಲಿ ಮಕ್ಕಳಿಗೆ ಅಟದ ಸ್ಥಳ ಹಾಗೂ ಮಲ್ಟಿಪ್ಲೆಕ್ಸ್‌ಗಳಿಗೆ ರಾಜ್ಯ ಸರ್ಕಾರ ಅವಕಾಶ ನೀಡಿಲ್ಲ. ಎಸ್ಕಲೇಟರ್‌ನಲ್ಲಿ ಎರಡು ಮೆಟ್ಟಿಲಿಗೆ ಒಬ್ಬರು ಮಾತ್ರ ನಿಲ್ಲಬೇಕು. ಮಾಲ್‌ಗಳಲ್ಲಿ ಎಸಿ ತಾಪಮಾನ 24 ಡಿಗ್ರಿಯಿಂದ 30 ಡಿಗ್ರಿ ಇರಬೇಕು. ಈ ಎಲ್ಲ ಮಾರ್ಗಸೂಚಿಗಳನ್ನ ಕಡ್ಡಾಯವಾಗಿ ಪಾಲನೆ ಮಾಡಲೇಬೇಕು.