ಮಹಾಮಳೆಗೆ ಜಲಾಹುತಿಯಾದ ಶಸ್ತ್ರಾಸ್ತ್ರಗಳು..! ಕೊಠಡಿಯಲ್ಲಿ ಸಂಗ್ರಹಿಸಿದ್ದ ಗನ್, ಬಂದೂಕು ನೀರುಪಾಲು

Nov 10, 2023, 9:09 AM IST

ಮಹಾಮಳೆಗೆ ನೀರಿಗೆ ಆಹುತಿ ಆಗಿರೋ ಬಂದೂಕುಗಳು ಹತ್ತಿಪ್ಪತ್ತು ಅಲ್ಲ..ಬರೋಬ್ಬರಿ 900 ಗನ್‌ಗಳು(Gun). ಬೆಂಗಳೂರಿನಲ್ಲಿ ಮೊನ್ನೆ ಸುರಿದ ಭಾರಿ ಮಳೆಗೆ ಶಸ್ತ್ರಾಗಾರದ ಒಳಗೆಲ್ಲಾ ನೀರು(Water) ನುಗ್ಗಿ ಭಾರಿ ಅವಾಂತರ ಆಗಿದೆ. ಚಿಕ್ಕ ಪುಟ್ಟ ಪಿಸ್ತೂಲ್ ಹಿಡಿದು ಮಶೀನ್ ಗನ್‌ಗಳೂ ಕೂಡ ಹಾನಿಗೆ ಒಳಗಾಗಿವೆ. ಒಟ್ಟೂ ಹಾನಿಗೆ ಒಳಗಾಗಿದ್ದು, 900 ಗನ್‌ಗಳು. ಮಳೆ ನೀರು(Rain Water) ನುಗ್ಗಿದ ತೀವ್ರತೆ ಹೇಗಿತ್ತು ಅನ್ನೋದನ್ನ ಹೇಳೋದಾದರೆ ಆಯುಧಗಳು ಇರೋ ಕೊಠಡಿಯ ಒಳಗೆ ಸುಮಾರು ಐದರಿಂದ ಆರು ಅಡಿಯವಷ್ಟು ನೀರು ತುಂಬಿದೆ. ಆಯುಧಗಳನ್ನ(Weapons) ಬಿಡಿ.. ಅದ್ರಲ್ಲಿ ತುಂಬುವ ಒಂದು ಬುಲೆಟ್‌ಗೂ ಕೂಡ ಲೆಕ್ಕವನ್ನ ಕೊಡ್ಬೇಕಾಗುತ್ತೆ. ಹೀಗಾಗಿ ಪ್ರತಿಯೊಂದನ್ನೂ ಕೂಡ ಕಾಗದ ಪತ್ರದಲ್ಲಿ ದಾಖಲು ಮಾಡಿರ್ತಾರೆ, ಆದ್ರೆ ಆ ಕಾಗದಗಳೂ ಕೂಡ ನೀರಿನಲ್ಲಿ ಮುಳುಗಿವೆ. ಹೀಗಾಗಿ ಅವುಗಳನ್ನೂ ಹಪ್ಪಳದ ರೀತಿಯಲ್ಲಿ ಒಣಗಿಸಲಾಗ್ತಾ ಇದೆ. ನೀರು ಹಾಗೂ ಮಣ್ಣು ತುಂಬಿದ ಬಂದೂಕುಗಳನ್ನ ಕ್ಲೀನ್ ಮಾಡೋದು ಸುಲಭದ ಪ್ರಕ್ರಿಯೆ ಅಲ್ಲ. ನೀರು ತುಂಬಿದಾಗ ಜಂಕ್ ಹಿಡಿಯೋ ಸಾಧ್ಯತೆಗಳಿರುತ್ತೆ, ಒಂದು ಬಂದೂಕು ಕ್ಲೀನ್ ಮಾಡೋಕೆ ತಾಸುಗಟ್ಟಲೇ ಸಮಯ ಬೇಕು. ಹರಿಬರಿಯಲ್ಲಿ ಮಾಡಿ ಮುಗಿಸೋ ಕೆಲಸ ಅದಲ್ಲ. ಇಂಚಿಂಗೂ ಜಾಗವನ್ನ ಸೂಕ್ಷ್ಮವಾಗಿ ಗಮನಿಸಿ ಸ್ವಚ್ಛ ಮಾಡಬೇಕಾಗುತ್ತೆ. ನೀರು ಹೊಕ್ಕಿದ್ರಿಂದ ತುಕ್ಕು ಹಿಡಿಯುವ ಚಾನ್ಸ್ ಹೆಚ್ಚು, ಹೀಗಾಗಿ ಅತ್ಯಂತ ನಾಜೂಕಾಗಿ ಕ್ಲೀನಿಂಗ್ ಮಾಡ್ತಾ ಇದ್ದಾರೆ ಪೊಲೀಸರು.

ಇದನ್ನೂ ವೀಕ್ಷಿಸಿ:  Today Horoscope: ಇಂದು ಪ್ರದೋಷ ಪೂಜೆ ಏಕೆ ಮಾಡಬೇಕು? ಇದರಿಂದ ಆಗುವ ಅನುಕೂಲವೇನು?