Nov 15, 2021, 10:44 AM IST
ಗದಗ(ನ.15): ಜೀವನದ ಸಂಧ್ಯಾ ಕಾಲದಲ್ಲಿ ಸೂರಿಲ್ಲದೇ ವೃದ್ಧೆಯೊಬ್ಬಳು ಪರದಾಡುತ್ತಿರುವ ಘಟನೆ ಗದಗ ತಾಲೂಕಿನ ನಾಗಾವಿ ಗ್ರಾಮದಲ್ಲಿ ನಡೆದಿದೆ. ಶಿಥಿಲವಾದ ಮನೆಯಲ್ಲಿ ದಿನವೂ ನರಯಾತನೆಯನ್ನ ಅನುಭವಿಸುತ್ತಿದ್ದಾಳೆ ಹಿರಿಯ ಜೀವ. 75 ವರ್ಷದ ನುಸೂಯಾ ಬಡಿಗೇರ್ ಎಂಬಾಕೆಯೇ ಈಗಲೋ ಆಗಲೋ ಬೀಳುವ ಮನೆಯಲ್ಲಿ ಪಡಬಾರದ ಸಂಕಷ್ಟಗಳನ್ನ ಅನುಭವಿಸುತ್ತಿದ್ದಾಳೆ.
Chikkamagaluru ಧಾರಾಕಾರ ಮಳೆಯಿಂದ ಕಾಫಿ ಬೆಳೆಗಾರರು ಕಂಗಾಲು
ಮಗನಿಗೆ ಕಿವಿ ಕೇಳಲ್ಲ, ಮಾತೂ ಬರಲ್ಲ ಹಾಗಾಗಿ ಅವರು ದುಡಿಮೆಯೂ ಅಷ್ಟಕಷ್ಟೇ ಆಗಿದೆ. ಹೀಗಾಗಿ ಜೀವನ ನಡೆಸುಚುದೋ ಬಹುದೊಡ್ಡ ಸವಾಲಾಗಿದೆ. ವೃದ್ಧೆಗೆ ಬರುತ್ತಿದ್ದ ವೃದ್ಧಾಪ್ಯ ವೇತನ ಕೂಡ ಸ್ಥಗಿತವಾಗಿದೆ. ಮಗನ ಅಂಗವಿಕಲ ವೇತನದಿಂದ ಮನೆ ಖರ್ಚು ನಿಭಾಯಿಸುತ್ತಿದ್ದಾಳೆ ಹಿರಿಯ ಜೀವ. ತಮಗೆ ಮನೆ ಮಂಜೂರು ಮಾಡುವಂತೆ ಪಂಚಾಯ್ತಿಗೆ ವೃದ್ಧೆ ಮನವಿ ಮಾಡಿಕೊಂಡಿದ್ದಾಳೆ.