ಲಾಕ್‌ಡೌನ್‌ ಎಫೆಕ್ಟ್‌: ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಬರೆ ಎಳೆದ ಹೆಮ್ಮಾರಿ ಕೊರೋನಾ

Jun 13, 2020, 1:05 PM IST

ಹುಬ್ಬಳ್ಳಿ(ಜೂ.13): ಲಾಕ್‌ಡೌನ್‌ನಿಂದ ವಾಯುವ್ಯ ಸಾರಿಗೆ ಸಂಸ್ಥೆಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಪ್ರಯಾಣಿಕರಿಲ್ಲದೆ ಬಸ್‌ಗಳು ಖಾಲಿ ಖಾಲಿಯಾಗಿ ಸಂಚಾರ ನಡೆಸುತ್ತಿವೆ. ಇದರಿಂದ ವಾಯುವ್ಯ ಸಾರಿಗೆ ಸಂಸ್ಥೆ ಅರ್ಥಿಕ ಸಂಕಷ್ಟದಲ್ಲಿದೆ. ಏತನ್ಮಧ್ಯೆ ವಾಯುವ ಸಾರಿಗೆ ಸಂಸ್ಥೆ ಅಧ್ಯಕ್ಷರ ಪತ್ರವೊಂದು ಗೊಂದಲದ ಗೂಡಾಗಿದೆ. 

ಸಿಲಿಕಾನ್‌ ಸಿಟಿಯಲ್ಲೂ ಹೆಚ್ಚಾಗುತ್ತಿದೆ ಕೊರೊನಾ ಮರಣ ಮೃದಂಗ

ಸಾಧಕ ಬಾದಕವನ್ನ ಚರ್ಚಿಸಿ ನಿರ್ಧಾರ ಬರುವಂತೆ ಹಲವರು ಸೂಚನೆ ನೀಡಿದ್ದಾರೆ. ವಾಯುವ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ. ಎಸ್‌.ಪಾಟೀಲ್‌ ಅವರು ಸಾರಿಗೆ ಸಚಿವ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಿಂದ ಅಧಿಕಾರಿಗಳ ವಲಯದಲ್ಲಿ ಚರ್ಚೆಯೊಂದನ್ನ ಹುಟ್ಟುಹಾಕಿದೆ.