ಅಶ್ಲೀಲ ವಿಡಿಯೋ ಕೇಸ್‌: ಗಾಲ್ಫ್‌ ಆಟಗಾರನನ್ನೂ ಮೀರಿಸಿದ ಪ್ರಜ್ವಲ್, ಸಚಿವ ಶಿವಾನಂದ ಪಾಟೀಲ್

Published : May 08, 2024, 10:21 AM IST
ಅಶ್ಲೀಲ ವಿಡಿಯೋ ಕೇಸ್‌: ಗಾಲ್ಫ್‌ ಆಟಗಾರನನ್ನೂ ಮೀರಿಸಿದ ಪ್ರಜ್ವಲ್, ಸಚಿವ ಶಿವಾನಂದ ಪಾಟೀಲ್

ಸಾರಾಂಶ

ಡಿಕೆಶಿ ಮೇಲೆ ಸಿಡಿ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಎಸ್‌ಐಟಿ ಇದೆ. ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಎಲ್ಲವೂ ಬರುತ್ತದೆ. ಸುಮ್ಮನೆ ಊಹೆ ಮಾಡಿ ಹೇಳೋದು ಅಲ್ಲ. ಕುಂಬಳಕಾಯಿ ಕಳ್ಳ ಅಂದರೆ ಬಿಜೆಪಿ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದೆ. ತಪ್ಪು ಮಾಡಿದವನಿಗೆ ಶಿಕ್ಷ ಆಗಲಿ ಎನ್ನುವ ನೈತಿಕತೆ ಮಾತು ಪ್ರಧಾನಿಗಳಿಂದ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದ ಸಚಿವ ಶಿವಾನಂದ ಪಾಟೀಲ್ 

ವಿಜಯಪುರ(ಮೇ.08):  ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಕೇಸ್ ಇದೀಗ ಅಂತಾರಾಷ್ಟ್ರೀಯ ಸುದ್ದಿಯಾಗಿದೆ. ಹಿಂದೆ ಒಬ್ಬ ಗಾಲ್ಫ್ ಕ್ರೀಡಾಪಟು ಇದ್ದ, ಆತ 42-43 ಕೇಸ್ ಮಾಡಿದ್ದ. ಆದರೆ ಪ್ರಜ್ವಲ್ ಅವನನ್ನೂ ಮೀರಿಸಿದ್ದಾರೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ವ್ಯಂಗ್ಯವಾಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಡಿಕೆಶಿ ಮೇಲೆ ಸಿಡಿ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಎಸ್‌ಐಟಿ ಇದೆ. ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಎಲ್ಲವೂ ಬರುತ್ತದೆ. ಸುಮ್ಮನೆ ಊಹೆ ಮಾಡಿ ಹೇಳೋದು ಅಲ್ಲ. ಕುಂಬಳಕಾಯಿ ಕಳ್ಳ ಅಂದರೆ ಬಿಜೆಪಿ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದೆ. ತಪ್ಪು ಮಾಡಿದವನಿಗೆ ಶಿಕ್ಷ ಆಗಲಿ ಎನ್ನುವ ನೈತಿಕತೆ ಮಾತು ಪ್ರಧಾನಿಗಳಿಂದ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಗೆ ಮುಜುಗರವಾಗಿದ್ದರೆ ಅವರೇ ತೀರ್ಮಾನಿಸಲಿ: ಕುಮಾರಸ್ವಾಮಿ

ಪ್ರಜ್ವಲ್ ಓಡಿ ಹೋಗಲು ಕಾಂಗ್ರೆಸ್ ಸರ್ಕಾರ ಕಾರಣ ಎಂದು ಪ್ರಧಾನಿ ಮೋದಿ ಹೇಳಿಕೆ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಸರ್ಕಾರಕ್ಕೆ ಗೊತ್ತಿದ್ದರೆ ಮೊದಲೇ ಹಿಡಿದುಕೊಂಡು ಕೂರ್ತಿತ್ತು. ಕಾಂಗ್ರೆಸ್ ಸರ್ಕಾರದ ಕೈನಲ್ಲಿ ವಿಮಾನ ನಿಲ್ದಾಣ ಇರೋದಿಲ್ಲ. ನೈತಿಕತೆ ಇದ್ದರೇ 24 ಗಂಟೆಯಲ್ಲಿ ಪ್ರಜ್ವಲ್‌ನನ್ನು ಹಿಡಿದು ತರಬಹುದಲ್ಲ ಎಂದು ಕೇಂದ್ರದ ಕಡೆಗೆ ಬೊಟ್ಟು ಮಾಡಿದರು. ಪಾಕಿಸ್ತಾನ್ ಗುಸ್ ಕೋ ಮಾರೆಂಗೆ ಅನ್ತಾರೆ, ಆರ್ಡಿನರಿ ಮನುಷ್ಯನನ್ನು ಹಿಡಿಯೋಕೆ ಆಗಲ್ವಾ ಎಂದು ಕೇಂದ್ರಕ್ಕೆ ಪ್ರಶ್ನಿಸಿದರು.
 

PREV
Read more Articles on
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ