ಮತದಾರ ಕಾಂಗ್ರೆಸ್‌ ಕೈ ಹಿಡಿಯಲು ಉತ್ಸುಕ: ಸಚಿವ ಪ್ರಿಯಾಂಕ್ ಖರ್ಗೆ

By Kannadaprabha NewsFirst Published May 8, 2024, 10:52 AM IST
Highlights

ಬಿಜೆಪಿಯ ಆರೋಪಗಳು ಕಾಂಗ್ರೆಸ್‌ ಫಲಿತಾಂಶದ ಮೇಲೆ ಪರಿಣಾಮ ಬೀರೋದಿಲ್ಲ. ಆರೋಪಕ್ಕೂ ಮುನ್ನ ವಿಷಯ ಅರಿಯೋದ ಬಿಜೆಪಿಯವರ ಹೇಳಿಕೆಗಳು ಜನರಿಗೆ ಗೊತ್ತಿದೆ. ಜನ ಅವನ್ನೆಲ್ಲ ನಂಬೋದಿಲ್ಲ. ಸಾಮಾಜಿಕ ಜಾಲ ತಾಣಗಳ ಮೂಲಕ ಅವನ್ನು ಜನರಿಗೆ ತಲುಪಿಸಲು ಯತ್ನಿಸಿದ್ದರೂ ಅವು ಬಿಜೆಪಿ ಅಂದುಕೊಂಡಂತೆ ಫಲ ಕೊಡೋದಿಲ್ಲ, ಕೊಟ್ಟಿಲ್ಲ ಎಂದ ಖರ್ಗೆ  

ಕಲಬುರಗಿ(ಮೇ.08):  ಕೇಂದ್ರದಲ್ಲಿ ಕಳೆದ 10 ವರ್ಷದಿಂದ ಬಿಜೆಪಿ ಆಡಳಿತ, ಜನವಿರೋಧಿ ನೀತಿಗಳಿಂದ ಬೇಸತ್ತ ಮತದಾರರು ಇದೀಗ ಕಾಂಗ್ರೆಸ್‌ನತ್ತ ವಾಲಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ನಿಶ್ಚಿತ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ತಮ್ಮ ಧರ್ಮಪತ್ನಿ ಶೃತಿ ಖರ್ಗೆ ಹಾಗೂ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರೊಂದಿಗೆ ಕೂಡಿಕೊಂಡು ಚಿತ್ತಾಪುರ ವಿಧಾನಸಭಾ ಮತಕ್ಷೇತ್ರದ ತಮ್ಮ ತವರೂರು ಗುಂಡಗುರ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ನಂಬರ್ 26 ರಲ್ಲಿ ಮತದಾನ ಮಾಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

KALABURAGI ELECTION 2024: ಶೋಕದ ಮನೆಯಿಂದ ಬಂದು ಮತದಾನ ಮಾಡಿದ ಮಾಜಿ ಶಾಸಕ ದಿ.ನಾಗರೆಡ್ಡಿ ಕುಟುಂಬಸ್ಥರು

ಕಲಬುರಗಿಯಲ್ಲಂತೂ ನಮ್ಮ ಗೆಲುವು ನೂರಕ್ಕೆ ನೂರು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರಿಯಾಂಕ್‌ ಖರ್ಗೆಯವರು, ಬಿಜೆಪಿ ಪಕ್ಷದ ಜನವಿರೋಧಿ ನೀತಿಯಿಂದಾಗಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆಂದರು.
ನಮಗೆ ಜನರೇ ದೇವರು, ಜನತಾ ಜನಾರ್ದನರೆಂದೇ ನಾವು ನಂಬುತ್ತೇವೆ. ಹೀಗಾಗಿ ಗುಡಿ ಗುಂಡಾರ ಸುತ್ತದೆ ರಾಧಾಕಷಣರ ಜೊತೆಗೂಡಿಕೊಂಡು ನಾವು ಮತದಾನಕ್ಕೆ ಆಗಮಿಸಿದ್ದೇವೆ. ಬಿಜೆಪಿಯವರು ಭಾವನಾತ್ಮಕವಾಗಿಯೇ ಹೆಚ್ಚು ಕೆಲಸ ಮಾಡೋದರಿಂದ ಅವರು ಜನರ ಬಾವನೆಗಳನ್ನು ಸೆಳೆಯಲಿಕ್ಕಾದರೂ ಮಂದಿರಗಳಿಗೆ ಹೋಗಲೇಬೇಕಲ್ಲವೆ? ಎಂದರು.

ಬಿಜೆಪಿಯ ಆರೋಪಗಳು ಕಾಂಗ್ರೆಸ್‌ ಫಲಿತಾಂಶದ ಮೇಲೆ ಪರಿಣಾಮ ಬೀರೋದಿಲ್ಲ. ಆರೋಪಕ್ಕೂ ಮುನ್ನ ವಿಷಯ ಅರಿಯೋದ ಬಿಜೆಪಿಯವರ ಹೇಳಿಕೆಗಳು ಜನರಿಗೆ ಗೊತ್ತಿದೆ. ಜನ ಅವನ್ನೆಲ್ಲ ನಂಬೋದಿಲ್ಲ. ಸಾಮಾಜಿಕ ಜಾಲ ತಾಣಗಳ ಮೂಲಕ ಅವನ್ನು ಜನರಿಗೆ ತಲುಪಿಸಲು ಯತ್ನಿಸಿದ್ದರೂ ಅವು ಬಿಜೆಪಿ ಅಂದುಕೊಂಡಂತೆ ಫಲ ಕೊಡೋದಿಲ್ಲ, ಕೊಟ್ಟಿಲ್ಲ ಎಂದು ಖರ್ಗೆ ಹೇಳಿದರು.

ಅಂಬೇಡ್ಕರ್ ಮೆಡಿಕಲ್‌ ಕಾಲೇಜಲ್ಲಿ ನೂರಾರು ಕೋಟಿ ಭ್ರಷ್ಟಾಚಾರ: ಖರ್ಗೆ, ಅಳಿಯ ರಾಧಾಕೃಷ್ಣ ವಿರುದ್ಧ ಬಿಜೆಪಿ ದೂರು

ಮತದಾರರ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ- ನಾನು ಗೆಲ್ಲುವೆ:

ತಮಗೆ ಕಲಬುರಗಿ ಲೋಕಸಭೆಯಲ್ಲಿ ಮತದಾರರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ, ಈ ಚುನಾವಣೆಲ್ಲಿ ಮತದಾರರು ಕೈ ಹಿಡಿಲಿುದ್ದಾರೆ ಎಂದಿರುವ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ತಮ್ಮ ಗೆಲವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುಂಡಗುರ್ತಿಯಲ್ಲಿ ಮತದಾನದ ನಂರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್‌ನ ಸಾಧನೆಗಳು, ತಮ್ಮ ಮಾವ ಖರ್ಗೆಯವರ ಅಭಿವೃದ್ಧಿ ಕೆಲಸಗಳು ಜನರ ಒಲವು ಪಡೆದಿವೆ. ಹೀಗಾಗಿ ಜನರು ನನಗೆ ಈ ಬಾರಿ ಪಾರ್ಲಿಮೆಂಟ್‌ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲಿದ್ದಾರೆ. ತಮ್ಮ ಮತಗಳ ಮೂಲಕ ಅದಾಗಲೇ ತಮ್ಮ ಅಭಿಮತ ವ್ಯಕ್ತಪಡಿಸಿದ್ದಾರಂದು ರಾಧಾಕೃಷ್ಣ ಹೇಳಿದ್ದಾರೆ.

click me!