ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ವಲಸೆ ಕಾರ್ಮಿಕರ ಪರದಾಟ: ಸಾಮಾಜಿಕ ಅಂತರಕ್ಕೆ ಕ್ಯಾರೆ ಎನ್ನದ ಜನ..!

May 3, 2020, 12:13 PM IST

ಬೆಂಗಳೂರು(ಮೇ.03):  ಸ್ವಂತ ಊರುಗಳಿಗೆ ತೆರಳಲು ವಲಸೆ ಕಾರ್ಮಿಕರು ನಿನ್ನೆ(ಶನಿವಾರ) ರಾತ್ರಿಯಿಂದಲೇ ಬಸ್‌ಗಾಗಿ ನಗರದ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿಯೇ ಕಾದು ಕುಳಿತಿದ್ದಾರೆ. ನಿನ್ನೆ ಸಂಜೆ 6 ಗಂಟೆ ನಂತರ ಬಸ್‌ ಸಂಚಾರ ಸ್ಥಗಿತಗಗೊಂಡಿತ್ತು. ಹೀಗಾಗಿ ಬಸ್‌ ಸಿಗದವರು ಇಡೀ ರಾತ್ರಿ ಮೆಜೆಸ್ಟಿಕ್‌ನಲ್ಲಿಯೇ ಕಾಲ ಕಳೆದಿದ್ದಾರೆ. 

ಕಾರ್ಮಿಕರ ನೆಪದಲ್ಲಿ ಊರು ಸೇರಲು ಐಟಿ-ಬಿಟಿ ನೌಕರರ ಪ್ಲಾನ್..!

ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಸಾವಿರಾರು ಜನರು ಜಮಾಯಿಸಿದ್ದಾರೆ.ಆದರೆ ಇವರು ಯಾರು ಸಾಮಾಜಿಕ ಅಂತರ ಪಾಲನೆ ಮಾಡಿಲ್ಲ, ಜೊತೆಗೆ ಮಾಸ್ಕ್‌ ಕೂಡ ಧರಿಸಿಲ್ಲ. ರಾತ್ರಿಯಿಡೀ ಊಟ ಇಲ್ಲ, ನಿದ್ದೆ ಇಲ್ಲದೆ ಕಾರ್ಮಿಕರು ವನವಾಸ ಅನುಭವಿಸಿದ್ದಾರೆ.