Dec 19, 2021, 10:28 AM IST
ಬೆಂಗಳೂರು (ಡಿ.19): ರಾಜ್ಯದಲ್ಲಿ ಸದ್ಯ ಒಮಿಕ್ರಾನ್ ಭೀತಿ ಹೆಚ್ಚಾಗಿದ್ದು ಇದರಿಂದ ಹೊಸ ವರ್ಷಕ್ಕೆ ಟಫ್ ರೂಲ್ಸ್ ಜಾರಿಯಾಗುವ ನಿರೀಕ್ಷೆ ಇದೆ. ಒಮಿಕ್ರಾನ್ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಸಿಲಿಕಾನ್ ಸಿಟಿ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ತಜ್ಞರು ಕೂಡ ಒಮಿಕ್ರಾನ್ ಭೀತಿ ಹಿನ್ನೆಲೆ ಸಂಭ್ರಮಾಚರಣೆ ಬಗ್ಗೆಆತಂಕ ವ್ಯಕ್ತಪಡಿಸಿದ್ದು ಪೊಲೀಸ್ ಆಯುಕ್ತರ ಬಳಿ ಈ ಬಗ್ಗೆ ಸಲಹಾ ಸಮಿತಿ ತಂಡ ಮಾಹಿತಿಯನ್ನು ಪಡೆದುಕೊಂಡಿದೆ.
Uttara Kannada: 'ಒಮಿಕ್ರೋನ್ ಸೋಂಕಿತ ದೇಶದಿಂದ ಆಗಮಿಸುವವರಿಗೆ ಮುದ್ರೆ'
ಹೊಸ ವರ್ಷ ಸಂಭ್ರಮಾಚರಣೆಗೆ ಬ್ರೇಕ್ ಬೀಳುವ ಸಾಧ್ಯತೆ ಇದ್ದು, ನೈಟ್ ಕರ್ಫ್ಯೂ ಜಾರಿ ಮಾಡುವ ಸಾಧ್ಯತೆ ಇದೆ. ವಿದೇಶಿಗರು ಭಾಗಿಯಾಗುವ ಹಿನ್ನೆಲೆ ಕಠಿಣ ನಿರ್ಬಂಧಗಳನ್ನು ಹೇರಲಾಗುತ್ತದೆ. ಆಚರಣೆಗಳಿಂದ ಮತ್ತೆ ಸೋಂಕು ಭಾರೀ ಪ್ರಮಾಣದಲ್ಲಿ ಏರಿಕೆ ಆಗುವ ಕುರಿತು ಆತಂಕ ವ್ಯಕ್ತಪಡಿಸಲಾಗಿದೆ. ಕರ್ಫ್ಯೂ ಜಾರಿ ಮಾಡಿದರೆ ಯಾವುದಕ್ಕೆ ಅವಕಾಶ, ಯಾವುದಕ್ಕೆಲ್ಲಾ ನಿರ್ಬಂಧ ಇರಲಿದೆ.? ತಜ್ಞರಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.