ರುಂಡವಿಲ್ಲದ ಮಂಗನ ಶವ ಪತ್ತೆ : ಗ್ರಾಮಸ್ಥರಲ್ಲಿ ಆತಂಕ

Jan 18, 2020, 3:28 PM IST

ಕಾರವಾರ [ಜ.18]:  ಉತ್ತರ ಕನ್ನಡದಲ್ಲಿ ಕೋತಿಯೊಂದು ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಮಂಗ​ನ​ಕಾ​ಯಿಲೆ ಲಸಿಕೆ : ತಪ್ಪುಕಲ್ಪನೆ ಬೇಡ...
 
ರುಂಡ ರಹಿತ ಕೋತಿಯ ಶವ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಆವರ್ಸಾ ಗ್ರಾಮದಲ್ಲಿ ಪತ್ತೆಯಾಗಿದ್ದು, ಮಂಗನ ಕಾಯಿಲೆ ಹಿನ್ನೆಲೆಯಲ್ಲಿ ಜನತೆಯಲ್ಲಿ ಆತಂಕ ಎದುರಾಗಿದೆ. 

ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.