5ನೇ ವಯಸಲ್ಲಿ ಭರತನಾಟ್ಯ ಕಲಿತ ಈ ಬಾಲೆ ಈಗ ಜನಪ್ರಿಯ ನಟಿ…ಯಾರೀಕೆ?

Published : Apr 30, 2024, 05:58 PM IST

ಕನ್ನಡ ಕಿರುತೆರೆ, ಹಿರಿತೆರೆಯ ನಟಿಸಿ ಸೈ ಎನಿಸಿ, ಕನ್ನಡ ಬಿಗ್ ಬಾಸ್ ಸೀಸನ್ 10 ರಲ್ಲಿ ಭರ್ಜರಿ ಪ್ರದರ್ಶನ ನೀಡಿ, ಸವಾಲಿಗೆ ಸವಾಲಿಗೆ ನಿಂತು ಅಭಿಮಾನಿಗಳಿಂದ ಸಿಂಹಿಣಿ ಎನಿಸಿಕೊಂಡ ನಟಿ ಸಂಗೀತ ಶೃಂಗೇರಿ.   

PREV
17
5ನೇ ವಯಸಲ್ಲಿ ಭರತನಾಟ್ಯ ಕಲಿತ ಈ ಬಾಲೆ ಈಗ ಜನಪ್ರಿಯ ನಟಿ…ಯಾರೀಕೆ?

ಕನ್ನಡ ಕಿರುತೆರೆ, ಹಿರಿತೆರೆಯ ನಟಿಸಿ ಸೈ ಎನಿಸಿ, ಕನ್ನಡ ಬಿಗ್ ಬಾಸ್ ಸೀಸನ್ 10 ರಲ್ಲಿ ಭರ್ಜರಿ ಪ್ರದರ್ಶನ ನೀಡಿ, ಸವಾಲಿಗೆ ನಿಂತು ಅಭಿಮಾನಿಗಳಿಂದ ಸಿಂಹಿಣಿ ಎನಿಸಿಕೊಂಡ ನಟಿ ಸಂಗೀತ ಶೃಂಗೇರಿ (Sangeetha Sringeri). 

27

ಕೇವಲ ನಟಿ ಮಾತ್ರ ಆಗಿರದೇ, ಭರತನಾಟ್ಯ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಸಂಗೀತಾ,  ಏಪ್ರಿಲ್ 29ರಂದು ಅಂತಾರಾಷ್ಟ್ರೀಯ ಡ್ಯಾನ್ಸ್ ದಿನದ ಅಂಗವಾಗಿ ತಮ್ಮ ಬಾಲ್ಯದ ಭರತಣಾಟ್ಯ(childhoot bharatanatya photos) ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡುವ ಮೂಲಕ, ಅದರ ಮಹತ್ವದ ಬಗ್ಗೆ, ತಾನು ಭರತನಾಟ್ಯ ಆರಂಭಿಸಿದ ಬಗ್ಗೆ ಬರೆದುಕೊಂಡಿದ್ದಾರೆ. 
 

37

ಭರತನಾಟ್ಯ ಸುಂದರವಾದ ಮತ್ತು ಅಭಿವ್ಯಕ್ತಿಶೀಲ ನೃತ್ಯ ಪ್ರಕಾರ. ನನ್ನ ತಾಯಿ ಯಾವಾಗಲೂ ನೃತ್ಯ ಮಾಡಲು ಬಯಸಿದ್ದರು . ಹಾಗಾಗಿ ಅವರು ನನ್ನನ್ನು ಚಿಕ್ಕ ವಯಸ್ಸಿನಲ್ಲಿಯೇ ಅಂದರೆ 5ನೇ ವಯಸ್ಸಿನಲ್ಲಿ ಭರತನಾಟ್ಯ ಕಲಿಯಲು ಪ್ರಾರಂಭಿಸುವಂತೆ ಮಾಡಿದರು. ಭಾರತೀಯ ಸೇನಾ ಹಿನ್ನೆಲೆಯಿಂದ ಬಂದಿರೋದರಿಂದ, ಹೆಚ್ಚಾಗಿ ಬೇರೆ ಬೇರೆ ಸ್ಥಳಗಳಿಗೆ ಟ್ರಾನ್ಸ್ಫರ್ ಸಿಗುತ್ತಿತ್ತು. ಈ ಸಮಯದಲ್ಲಿ, ನಾನು ಈ ಕಲಾ ಪ್ರಕಾರವನ್ನು ವಿವಿಧ ಸ್ಥಳಗಳಲ್ಲಿ ವಿವಿಧ ಗುರುಗಳ ಅಡಿಯಲ್ಲಿ ಅಧ್ಯಯನ ಮಾಡಿರೋದಾಗಿ ಹೇಳಿದ್ದಾರೆ. 
 

47

ಅದೃಷ್ಟವಿರಲಿ ಅಥವಾ ಇಲ್ಲದಿರಲಿ, ನಾನು ವ್ಯಾಪಕವಾದ ಜ್ಞಾನ ಗಳಿಸಿದ್ದಂತೂ ನಿಜ.  ಪ್ರತಿಯೊಬ್ಬ ಡ್ಯಾನ್ಸ್ ಟೀಚರ್ ಸಹ ವಿಶಿಷ್ಟ ಶೈಲಿ ಮತ್ತು ವಿಧಾನವನ್ನು ಹೊಂದಿರೋದನ್ನು ನಾನು ಗುರುತಿಸಿದೆ. ಪ್ರತಿ ಬಾರಿ ನಾನು ಹೊಸ ಡ್ಯಾನ್ಸ್ ಕ್ಲಾಸಿಗೆ  ಕಾಲಿಟ್ಟಾಗ, ನಾನು ಹಿಂದೆ ಕಲಿತದ್ದನ್ನು ಬಿಟ್ಟು ಹೊಸತನಕ್ಕೆ ಒಗ್ಗಿಕೊಳ್ಳೋದನ್ನು ಆರಂಭಿಸಿದೆ. ನನ್ನ ಕಂಫರ್ಟ್ ಜೋನ್ ಬಿಟ್ಟು, ವಿವಿಧ ಪ್ರಕಾರಗಳನ್ನು ಹೆಚ್ಚಿಗೆ ತಿಳಿದುಕೊಳ್ಳಲು ಇದು ಸಹಾಯ ಮಾಡಿತು ಎಂದು ಬರೆದಿದ್ದಾರೆ. 
 

57

ಇನ್ನು ಶ್ರೀಮಂಜುನಾಥ ಸಿನಿಮಾದ ಓಂ ಮಹಾಪ್ರಾಣ ದೀಪಂ ಹಾಡಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದು ಹೇಳಿರುವ ಸಂಗೀತ ಶೃಂಗೇರಿ, ಈ ಹಾಡಿಗೆ ನಾನು ಅದೆಷ್ಟು ಸಾಲ ತಾಂಡವ ನೃತ್ಯ ಮಾಡಿದ್ದೇನೋ ಗೊತ್ತಿಲ್ಲ. ಇದು ನನಗಿಷ್ಟದ ಹಾಡು ಆಗಿರೋದರಿಂದ ಸುಮಾರು 50 ಸಲ ವಿವಿಧ ಸ್ಟೇಜ್ ಗಳಲ್ಲಿ ಈ ಡ್ಯಾನ್ಸ್ ಮಾಡಿರೋದಾಗಿ ಸಂಗೀತ ಹೇಳಿದ್ದಾರೆ. 
 

67

ಈ ಅಂತಾರಾಷ್ಟ್ರೀಯ ನೃತ್ಯ (International dance day) ದಿನದಂದು, ಚಲನೆಯ ಭಾಷೆ ನಿಮ್ಮ ಆತ್ಮದ ಆಳವನ್ನು ಜಾಗೃತಗೊಳಿಸಲಿ, ಮಾನವೀಯತೆಯು ಹೃದಯ ಬಡಿತದೊಂದಿಗೆ ನಿಮ್ಮನ್ನು ಸಂಪರ್ಕಿಸಲಿ.  ಮನಸೋ ಇಚ್ಚೇ ನೃತ ಮಾಡಿ, ನಿಮ್ಮ ಆತ್ಮ ಘರ್ಜಿಸುವಂತೆ ಮಾಡಿ ಎಂದು ಸಂಗೀತ ಶೃಂಗೇರಿ ಬರೆದುಕೊಂಡಿದ್ದರು. 

77

ಸೋಶಿಯಲ್ ಮಿಡಿಯಾದಲ್ಲಿ (Social media) ಆಕ್ಟೀವ್ ಆಗಿರುವ ಸಂಗೀತಾ ಸಫಾರಿ ಮಾಡುತ್ತಾ, ಪ್ರಕೃತಿಯ ಮಧ್ಯೆ ಕಳೆದು ಹೋಗುವ ಮೂಲಕ ಎಂಜಾಯ್ ಮಾಡುತ್ತಿದ್ದಾರೆ, ಫೋಟೋಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಕರಿಯರ್ ವಿಷ್ಯಕ್ಕೆ ಬಂದ್ರೆ ಸಂಗೀತಾ ಅಭಿನಯದ ಮಾರಿಗೋಲ್ಡ್ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿತ್ತು. 

click me!

Recommended Stories