ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಕನ್ನಡದ ಜಿಂಕೆಮರಿ ನಂದಿತಾ ಶ್ವೇತಾ

Published : Apr 30, 2024, 06:04 PM IST

ಕನ್ನಡದಲ್ಲಿ ನಂದ ನಂದಿತಾ ಸಿನಿಮಾದಲ್ಲಿ ನಟಿಸಿ, ಜಿಂಕೆ ಮರೀನಾ ಹಾಡಿನ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ಹುಡುಗಿ ನಂದಿತಾ ಶ್ವೇತಾ, ಇದೀಗ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.   

PREV
17
ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಕನ್ನಡದ ಜಿಂಕೆಮರಿ ನಂದಿತಾ ಶ್ವೇತಾ

ಕನ್ನಡದಲ್ಲಿ 16 ವರ್ಷಗಳ ಹಿಂದೆ ಭಾರಿ ಜನಪ್ರಿಯತೆ ಗಳಿಸಿದ ಜಿಂಕೆ ಮರೀನಾ, ಜಿಂಕೆಮರೀನಾ ಹಾಡು ನೆನಪಿದೆಯೇ? ಹೇಗೆ ಮರೆಯೋಕೆ ಸಾಧ್ಯ ಅಲ್ವಾ? ಅಂದಿನ ಯುವಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ ಹಾಡದು. ಈ ಹಾಡಿಗೆ ಹೆಜ್ಜೆ ಹಾಕಿದ ನಟಿ ನಂದಿತಾ ಶ್ವೇತಾ (Nandita Swetha). 
 

27

ಕನ್ನಡ ಕಿರುತೆರೆಯಲ್ಲಿ ಅಂದರೆ ಉದಯ ಮ್ಯೂಸಿಕ್ ನಲ್ಲಿ ವಿಜೆ ಆಗಿ ಕಾಣಿಸಿಕೊಂಡ ಶ್ವೇತಾ, 2008 ರಲ್ಲಿ ತೆರೆಕಂಡ ನಂದನಂದಿತಾ (Nanda Nanditha) ಸಿನಿಮಾದಲ್ಲಿ ಲೂಸ್ ಮಾದ ಯೋಗಿಗೆ ನಾಯಕಿಯಾಗಿ ಶ್ವೇತಾ ನಟಿಸಿದ್ದರು. ಈ ಸಿನಿಮಾ ಭರ್ಜರಿ ಹಿಟ್ ಕೊಟ್ಟಿದ್ದು, ಹಾಗಾಗಿ ಶ್ವೇತಾ ಆ ಸಿನಿಮಾದ ತಮ್ಮ ಹೆಸರನ್ನು ತಮ್ಮ ಹೆಸರಿನ ಜೊತೆ ಸೇರಿಸಿ ನಂದಿತಾ ಶ್ವೇತಾ ಎಂದೇ ಜನಪ್ರಿಯರಾದರು. 
 

37

ಮೊದಲ ಸಿನಿಮಾದಲ್ಲಿ ಜನಪ್ರಿಯತೆ ಗಳಿಸಿದರೂ ಸಹ ಶ್ವೇತಾಗೆ ಕನ್ನಡದಲ್ಲಿ ಆಫರ್ ಗಳು ಸಿಗಲೇ ಇಲ್ಲ, ನಂತರ ತಮಿಳು -ತೆಲುಗು ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟ ಶ್ವೇತಾ ಅಲ್ಲಿಂದ ತಿರುಗಿ ನೋಡಲೇ ಇಲ್ಲ. ಸದ್ಯ ತಮಿಳು ಮತ್ತು ತೆಲುಗು ಸಿನಿಮಾ ಲೋಕದ ಜನಪ್ರಿಯ ನಾಯಕಿಯಾಗಿ ಮೆರೆಯುತ್ತಿದ್ದಾರೆ.
 

47

2012 ರಲ್ಲಿ ಅಟ್ಟಕತ್ತಿ ಎನ್ನುವ ತಮಿಳು ಸಿನಿಮಾದಲ್ಲಿ (Tamil cinema) ನಟಿಸುವ ಮೂಲಕ ತಮಿಳಿಗೆ ಎಂಟ್ರಿ ಕೊಟ್ಟರು. ತಮಿಳಿನಲ್ಲಿ ಸೂಪರ್ 25 ಸಿನಿಮಾಗಳಲ್ಲಿ ಹಾಗೂ ತೆಲುಗಿನಲ್ಲಿ ಸುಮಾರು 20 ಸಿನಿಮಾಗಳಲ್ಲಿ ನಂದಿತಾ ಶ್ವೇತಾ ನಟಿಸಿದ್ದಾರೆ. 
 

57

ತಮಿಳು, ಮತ್ತು ತೆಲುಗಿನ ಅಟ್ಟಕತ್ತಿ, ಎದಿರ್ ನೀಚಲ್, ಮುಂದಾಸು ಪಟ್ಟಿ, ಎಕ್ಕಡಕು ಪೋತಾವು ಚಿನ್ನವುಡಾ ಸಿನಿಮಾದ ಅಭಿನಯಕ್ಕಾಗಿ ಶ್ವೇತಾಗೆ ಜಯ ಟಿವಿ ಮೂವಿ ಅವಾರ್ಡ್, ಸೈಮಾ ಅವಾರ್ಡ್, ಎಡಿಸನ್ ಅವಾರ್ಡ್, ಫಿಲಂ ಫೇರ್ ಅವಾರ್ಡ್ ಗಳು ಸಹ ಲಭ್ಯವಾಗಿವೆ. 
 

67

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ನಟಿಯಾಗಿ, ಮಾಡೆಲ್ ಆಗಿ ಗುರುತಿಸಿಕೊಂಡಿರುವ ಶ್ವೇತಾ, ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇವತ್ತು ತಮ್ಮ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಶ್ವೇತಾ ಇನ್ನೂಸಿಂಗಲ್. 
 

77

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೋಟೋ ಶೇರ್ ಮಾಡುವ ನಂದಿತಾ ಶ್ವೇತಾ, ತಮ್ಮ ಹಾಟ್ ಲುಕ್‌ನಿಂದಾಗಿ ಸಹ ಸದಾ ಸುದ್ದಿಯಲ್ಲಿರುತ್ತಾರೆ. ಇನ್ನು ನಟಿ ಫೈಬ್ರೊಮ್ಯಾಲ್ಗಿಯಾ ಎಂಬ ಸ್ನಾಯು ಅಸ್ವಸ್ಥತೆ ಸಮಸ್ಯೆಯಿಂದ ಬಳಲುತ್ತಿದ್ದು, ಆ ಬಗ್ಗೆಯೂ ಹಿಂದೆ ಭಾರಿ ಚರ್ಚೆಯಾಗಿತ್ತು. 
 

Read more Photos on
click me!

Recommended Stories