Mar 13, 2023, 12:18 PM IST
ಬೆಂಗಳೂರು ಕರಗ ಕುರಿತು ಶಾಸಕ ಎನ್.ಎ.ಹ್ಯಾರಿಸ್ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಇಂದು ನಡೆಯಬೇಕಿದ್ದ ಸುದ್ದಿಗೋಷ್ಠಿ ರದ್ದು ಮಾಡಿ ವಹ್ನಿಕುಲ ಕ್ಷತ್ರಿಯ(ತಿಗಳ) ಜನಾಂಗದ ಕ್ಷಮೆಯನ್ನು ಶಾಸಕ ಹ್ಯಾರಿಸ್ ಕೇಳಿದ್ದಾರೆ. ಮಾತಿನ ಭರಾಟೆಯಲ್ಲಿ ಈ ರೀತಿ ಮಾತನಾಡಿದ್ದೇನೆ. ತನ್ನ ಮಾತಿನ ತಪ್ಪು ಅರಿವಾಗಿದೆ. ವಹ್ನಿಕುಲ ಕ್ಷತ್ರಿಯ,(ತಿಗಳ) ಸಮುದಾಯದ ಹಲವು ಸ್ನೇಹಿತರು ನನ್ನ ಅತ್ಮಿಯರು. ದಯವಿಟ್ಟು ವಹ್ನಿಕುಲ ಕ್ಷತ್ರಿಯ(ತಿಗಳ) ಸಮುದಾಯದ ಯಾರಿಗದ್ರು ಮನಸ್ಸು ನೋವಗಿದ್ರೆ ಕ್ಷಮೆ ಇರಲಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಶಾಸಕ ಹ್ಯಾರಿಸ್ ಕ್ಷಮೆಯಾಚಿಸಿದ್ದಾರೆ.