Mangaluru: 'ಹಿಂದೂ ಸಮಾಜ ಫುಟ್ಬಾಲ್ ಅಲ್ಲ, ಹಿಂದೂ ಸಮಾಜ ಕಲ್ಲುಗುಂಡು'

Nov 26, 2021, 5:32 PM IST

ಮಂಗಳೂರು (ನ. 26): ಬಂಟ್ವಾಳ ಕಾರಿಂಜೇಶ್ವರ ದೇವಸ್ಥಾನದ ವಿಚಾರದಲ್ಲಿ ಹಿಂದೂ ಸಂಘಟನೆ (Hindu Organisation) ಮತ್ತು ಜಿಲ್ಲಾಡಳಿತದ ಸಂಘರ್ಷ ತಾರಕಕ್ಕೇರಿದೆ.  ಕಾರಿಂಜೇಶ್ವರದ ಕೇಸರಿ ಧ್ವಜ ಮುಟ್ಟಿದ್ರೆ ಕಾಲು ಮುರಿಯುತ್ತೇವೆ ಎಂದು  ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎಸ್ಸೈ ಸೌಮ್ಯಗೆ ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಾಂತಾಯ ಎಚ್ಚರಿಕೆ ನೀಡಿದ್ದಾರೆ.

Stop Illegal Mining: ದ.ಕ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ಡಿ.ಸಿ ಕೊರಳ ಪಟ್ಟಿ ಹಿಡಿತೀವಿ: ಜಗದೀಶ್ ಕಾರಂತ್  
 

ದ.ಕ ಜಿಲ್ಲಾಧಿಕಾರಿ ನಮ್ಮ ಮುಖಂಡರ ಮೇಲೆ ಕೇಸು ದಾಖಲು ಮಾಡಿದ್ದಾರೆ. ಆ ಬಳಿಕ ದೇವಸ್ಥಾನದಲ್ಲಿರುವ ಭಗವದ್ವಜವನ್ನು ಎಸ್ ಐ ಸೌಮ್ಯ ತೆಗೆಯುವುದಕ್ಕೆ ಹೇಳುತ್ತಾರೆ. ಇದೇನು ಗೋರಿ ಮುಹಮ್ಮದರ ಕಾಲವಾ..? ಟಿಪ್ಪು ಸುಲ್ತಾನ್ ರ ಕಾಲವಾ..?ಸ್ಥಳೀಯ ಪೊಲೀಸ್ ಭಗವದ್ವಜವನ್ನು ತೆಗೆಯಲು ಹೇಳ್ತಾರಲ್ವಾ..? ನೀವು ತೆಗೆದ್ರೆ ನಾವು ಒಂದು ವಾರದಲ್ಲಿ ಸಾವಿರ ಧ್ವಜವನ್ನು ಹಾಕ್ತೇವೆ. ತಾಕತ್ತಿದ್ರೆ ಅದನ್ನು ತೆಗೆಯಲಿ, ಮಕ್ಕಳಾಟ ಅಂತಾ ಯೋಚಿಸಿದ್ರಾ..? ಹಿಂದೂ ಸಮಾಜ ಫುಟ್ಬಾಲ್ ಅಲ್ಲ, ಹಿಂದೂ ಸಮಾಜ ಕಲ್ಲುಗುಂಡು. ಇಂಥದ್ದನ್ನ ಮಾಡಿದ್ರೆ  ನಿಮ್ದು  ಕಾಲು ಮುರಿಯುತ್ತೆ' ಎಂದು ರಾಧಾಕೃಷ್ಣ ಅಡ್ಯಾಂತಾಯ ಎಚ್ಚರಿಕೆ ನೀಡಿದ್ದಾರೆ.