Dec 10, 2022, 1:04 PM IST
ಕಳೆದ ಬಾರಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ಭ್ರಷ್ಟಾಚಾರವನ್ನು ತೋರಿಸಿದ್ದು ಅದರ ಇಂಪ್ಯಾಕ್ಟ್ ಯಾವ ರೀತಿ ಆಗಿದೆ ಎಂದು ನಿಮಗೆ ಗೊತ್ತಿದೆ. ಕವರ್ ಸ್ಟೋರಿ ಮಾಡಿದ್ದ ಅದೊಂದು ಸುದ್ದಿಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಬೆಂಗಳೂರಿನಿಂದ ಬೆಳಗಾವಿವರೆಗೆ ಇಲಾಖೆಯಲ್ಲಿನ ಭ್ರಷ್ಟಾಚಾರದ ಮಾತೇ ತಾಂಡವ ವಾಡುತ್ತಿದೆ. ನಾವು ರಹಸ್ಯ ಕಾರ್ಯಾಚರಣೆ ಮಾಡಿದ ಪ್ರತಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅದರಲ್ಲೂ ಗುಟಕಾ ಮಾಫಿಯಾ ವಿರುದ್ಧ ಕಾರ್ಯಾಚರಣೆ ಮಾಡಲು ನಮ್ಮ ಟೀಂ ಮುಂದಾಗಿದೆ.