ಕರ್ನಾಟಕದ ರೈತರಿಗೆ ಸಂತಸದ ಸುದ್ದಿ ನೀಡಿದ ಐಎಂಡಿ, ಈ ವರ್ಷ ಸಾಮಾನ್ಯಕ್ಕಿಂತ ಹೆಚ್ಚಿನ ಮಾನ್ಸೂನ್‌!

ಭಾರತೀಯ ಹವಾಮಾನ ಇಲಾಖೆಯು 2025ರಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಾನ್ಸೂನ್ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ.

imd-forecast-above-normal-monsoon-2025-karnataka-rainfall-prediction san

ನವದೆಹಲಿ (ಏ.15): ದೇಶದ ರೈತರು ಹಾಗೂ ಕೃಷಿ ವಲಯಕ್ಕೆ ಖುಷಿ ನೀಡುವಂಥ ವಿಚಾರವನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. 2025 ರಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಾನ್ಸೂನ್ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ದೇಶಾದ್ಯಂತ ಮಾನ್ಸೂನ್ ಮಳೆ (ಜೂನ್-ಸೆಪ್ಟೆಂಬರ್) ದೀರ್ಘಾವಧಿಯ ಸರಾಸರಿ (LPA) ಯ 105% ಆಗಿದ್ದು, ಇದು 87 ಸೆಂ.ಮೀ. ಆಗಿದ್ದು, +/-5% ಮಾದರಿ ದೋಷದೊಂದಿಗೆ ಇರುತ್ತದೆ ಎಂದು ಹವಾಮಾನ ಇಲಾಖೆ ತನ್ನ ಮೊದಲ ಅಂದಾಜಿನಲ್ಲಿ ತಿಳಿಸಿದೆ.

Latest Videos

"2025 ರಲ್ಲಿ ದೇಶಾದ್ಯಂತ ನೈಋತ್ಯ ಮಾನ್ಸೂನ್ ಋತುಮಾನದ (ಜೂನ್ ನಿಂದ ಸೆಪ್ಟೆಂಬರ್) ಮಳೆಯು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ (> ದೀರ್ಘಾವಧಿಯ ಸರಾಸರಿ (LPA) ಯ 104%). ಪರಿಮಾಣಾತ್ಮಕವಾಗಿ, ದೇಶಾದ್ಯಂತ ಋತುಮಾನದ ಮಳೆಯು LPA ಯ 105% ಆಗಿದ್ದು, ಮಾದರಿ ದೋಷ ± 5% ರಷ್ಟಿದೆ" ಎಂದು ಐಎಂಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಮಾನ್ಸೂನ್ ಮಳೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ತಿಳಿಸಿದೆ, ಇದು ದೀರ್ಘಾವಧಿಯ ಸರಾಸರಿಯ 96-105% ವ್ಯಾಪ್ತಿಯಲ್ಲಿ ಬರುತ್ತದೆ.

"ಮುನ್ಸೂಚನೆಯ ಪ್ರಕಾರ, ಮಾನ್ಸೂನ್ ಋತುವಿನಲ್ಲಿ ತಟಸ್ಥ ಎಲ್ ನಿನೋ-ಸದರ್ನ್ ಆಸಿಲೇಷನ್ (ENSO) ಪರಿಸ್ಥಿತಿಗಳು ಮುಂದುವರಿಯುವ ಸಾಧ್ಯತೆಯಿದೆ" ಎಂದು ಐಎಂಡಿಯ ಡಿಜಿಎಂ ಎಂ ಮೊಹಾಪಾತ್ರ ಹೇಳಿದರು. ನೈಋತ್ಯ ಮಾನ್ಸೂನ್ ಋತುವಿನಲ್ಲಿ ತಟಸ್ಥ ಹಿಂದೂ ಮಹಾಸಾಗರದ ದ್ವಿಧ್ರುವಿ (IOD) ಪರಿಸ್ಥಿತಿಗಳನ್ನು IMD ಮುನ್ಸೂಚನೆ ನೀಡಿದೆ. 2025 ರ ಮೇ ಕೊನೆಯ ವಾರದಲ್ಲಿ ಮಾನ್ಸೂನ್ ಋತುವಿನ ಮಳೆಯ ಅಪ್‌ಡೇಟ್‌ ಮುನ್ಸೂಚನೆಗಳನ್ನು IMD ನೀಡಲಿದೆ.

ಕರ್ನಾಟಕದಲ್ಲಿ ಹೇಗಿರಲಿದೆ ಮಾನ್ಸೂನ್‌: ಕರ್ನಾಟಕದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಉತ್ತಮ ಮಳೆಯಾಗಲಿದೆ ಎಂದು ಐಎಂಡಿ ಅಂದಾಜಿಸಿದೆ. ಕರಾವಳಿ ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದ್ದರೆ, ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಹಾಗೂ ಸಾಮಾನ್ಯಕ್ಕಿಂತ ಹೆಚ್ಚಿನ ನಡುವಿನ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದೆ ಎಂದು ತಿಳಿಸಿದೆ.

ರಾಜ್ಯದಲ್ಲಿ ಇನ್ನೂ 1 ವಾರ ಮಳೆ ಸಾಧ್ಯತೆ; ಏಪ್ರಿಲ್ 17, 18ಕ್ಕೆ ಹೆಚ್ಚಿನ ಮಳೆಯ ನಿರೀಕ್ಷೆ

ಕರ್ನಾಟಕದ ಪ್ರಮುಖ ಮಾನ್ಸೂನ್ ಸ್ಥಳಗಳಲ್ಲಿ ಎಂದಿನಂತೆ ಮಳೆಯಾಗುವ ಸಾಧ್ಯತೆ ಇದ್ದು, ಜೂನ್‌ನಲ್ಲಿ ಸಾಮಾನ್ಯಕ್ಕಿಂತ ಕಡಿಮೆ, ಜುಲೈನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಹಾಗೂ ಆಗಸ್ಟ್‌ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಲಿದೆ.

ಮುಂಗಾರುಪೂರ್ವ ಮಳೆ ಅರ್ಭಟ ಜೋರು: ಸಿಡಿಲಿನ ಹೊಡೆತ ತಪ್ಪಿಸಲು ಹವಾಮಾನ ಇಲಾಖೆ ನೀಡಿರುವ ಈ ಸಲಹೆ ಪಾಲಿಸಿ!

vuukle one pixel image
click me!