ಐಪಿಎಲ್ ಕ್ರಿಕೆಟ್ ಉತ್ಸವ ಭಾರತದ ವಿವಿಧ ನಗರಗಳಲ್ಲಿ ನಡೆಯುತ್ತಿದೆ. ಪ್ರಸಕ್ತ ಐಪಿಎಲ್‌ನಲ್ಲಿ ಪ್ರಬಲ ತಂಡಗಳಲ್ಲಿ ಒಂದಾದ ಪಂಜಾಬ್ ಕಿಂಗ್ಸ್ 5 ಪಂದ್ಯಗಳಲ್ಲಿ ಆಡಿ 3ರಲ್ಲಿ ಗೆದ್ದು 2ರಲ್ಲಿ ಸೋತು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ ಇಂದು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದೆ.
24
ಲಾಕಿ ಫರ್ಗುಸನ್, ಐಪಿಎಲ್
ಬಲಿಷ್ಠ ಕೋಲ್ಕತಾ ನೈಟ್ ರೈಡರ್ಸ್ ಸವಾಲಿಗೂ ಮುನ್ನ ಪಂಜಾಬ್ ಕಿಂಗ್ಸ್‌ಗೆ ಬಿಗ್ ಶಾಕ್ ಎದುರಾಗಿದ್ದು, ಪಂಜಾಬ್ ತಂಡದ ಪ್ರಮುಖ ವೇಗಿ ಲಾಕಿ ಫರ್ಗ್ಯೂಸನ್ ಫಿಟ್ನೆಸ್ ಸಮಸ್ಯೆಯಿಂದಾಗಿ 18ನೇ ಆವೃತ್ತಿಯ ಐಪಿಎಲ್‌ನಿಂದಲೇ ಹೊರಬಿದ್ದಿದ್ದಾರೆ.
34
ಲಾಕಿ ಫರ್ಗುಸನ್, ಕ್ರಿಕೆಟ್
ಲಾಕಿ ಫರ್ಗುಸನ್ ಬದಲಿಗೆ ಯಾರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುವುದು ಎಂಬುದು ಇನ್ನೂ ಖಚಿತವಾಗಿಲ್ಲ. ಅವರ ಸ್ಥಾನಕ್ಕೆ ಅಝ್ಮತುಲ್ಲಾ ಓಮರ್ಝೈ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು.
44
ಪಂಜಾಬ್ ಕಿಂಗ್ಸ್, ಕ್ರೀಡೆ
ಫರ್ಗ್ಯೂಸನ್ ಅನುಪಸ್ಥಿತಿಯಲ್ಲಿ ಯುಜುವೇಂದ್ರ ಚಹಲ್ ನಮಗೆ ಪ್ರಮುಖ ಬೌಲರ್. ಅವರು ನಿರ್ಣಾಯಕ ಸಂದರ್ಭಗಳಲ್ಲಿ ವಿಕೆಟ್ ಪಡೆದಿದ್ದಾರೆ. ಐಪಿಎಲ್ ಗೆಲ್ಲಲು ಚಾಹಲ್ ನಮಗೆ ಅಗತ್ಯ ಎಂದು ಜೇಮ್ಸ್ ಹೋಪ್ಸ್ ಹೇಳಿದ್ದಾರೆ.