ಗ್ರಾ.ಪಂ. ಸದಸ್ಯರು, ಗ್ರಾಮಸ್ಥರನ್ನು ಸೇರಿಸಿ ಗ್ರಾಮ ಲೆಕ್ಕಾಧಿಕಾರಿ ಕ್ರಿಕೆಟ್ ಆಟ!

Apr 20, 2020, 9:34 PM IST

ಬೆಳಗಾವಿ (ಏ.20): ಲಾಕ್‌ಡೌನ್ ಉಲ್ಲಂಘಿಸಿ ಗ್ರಾ.ಪಂ. ಸದಸ್ಯರು, ಗ್ರಾಮಸ್ಥರನ್ನು ಸೇರಿಸಿ ಗ್ರಾಮ ಲೆಕ್ಕಾಧಿಕಾರಿ ಕ್ರಿಕೆಟ್ ಆಟ ಆಡಿರುವ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸೊಪಡ್ಲ ಗ್ರಾಮದಲ್ಲಿ ನಡೆದಿದೆ.

ಕಂಠಪೂರ್ತಿ ಕುಡಿದು ಗ್ರಾಮಸ್ಥರೊಂದಿಗೆ ಕ್ರಿಕೆಟ್ ಬೆಟ್ಟಿಂಗ್ ಬಾಜಿ ಆಡುತ್ತಿದ್ದ ಗ್ರಾಮಲೆಕ್ಕಾಧಿಕಾರಿಯನ್ನು ರೈತ ಮುಖಂಡರು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.