ಹತ್ತು ವರ್ಷದ ಆಡಳಿತದಲ್ಲಿ ಒಂದು ಆರೋಪವೂ ಪ್ರಧಾನಿ ಮೋದಿ ಅವರ ಮೇಲೆ ಇಲ್ಲ. ಮೋದಿ ಕೇವಲ ಭಾರತದ ನಾಯಕರಲ್ಲ, ವಿಶ್ವದ ನಾಯಕರು ಎಂದು ಮೋದಿ ಆಡಳಿತದ ಕಾರ್ಯವೈಖರಿ ಹಾಡಿಹೊಗಳಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಚಿಕ್ಕೋಡಿ (ಏ.29): ಹತ್ತು ವರ್ಷದ ಆಡಳಿತದಲ್ಲಿ ಒಂದು ಆರೋಪವೂ ಪ್ರಧಾನಿ ಮೋದಿ ಅವರ ಮೇಲೆ ಇಲ್ಲ. ಮೋದಿ ಕೇವಲ ಭಾರತದ ನಾಯಕರಲ್ಲ, ವಿಶ್ವದ ನಾಯಕರು ಎಂದು ಮೋದಿ ಆಡಳಿತದ ಕಾರ್ಯವೈಖರಿ ಹಾಡಿಹೊಗಳಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಇಂದು ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಸಂಕೇಶ್ವರ ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ 52 ಪಕ್ಷ ಒಂದು ಪಾರ್ಟಿ ಪರ ಇವೆ. ಆದರೆ ಹಿಂದೂಗಳ ಪರ ಇರುವದು ಒಂದೇ ಪಕ್ಷ ಅದು ಬಿಜೆಪಿ. ಸನಾತನ ಹಿಂದೂ ಧರ್ಮ ರಕ್ಷಣೆ ಮೋದಿ ಅವರಿಂದ ಮಾತ್ರ ಸಾಧ್ಯ ಎಂದರು.
ಡಿಕೆಶಿ, ಸಿದ್ದರಾಮಯ್ಯ ಕೊರೊನಾ ಲಸಿಕೆ ಹಾಕಿಸಿಕೊಂಡರೆ ಗಂಡಸ್ತನ ಹೋಗುತ್ತೆ ಎಂದರು. ಆದರೆ ರಾತ್ರೋರಾತ್ರಿ ಹೋಗಿ ಲಸಿಕೆ ಹಾಕಿಸಿಕೊಂಡು ಬಂದರು. ಗಾಂಧಿ, ನೆಹರೂ ಯಾರೂ ಹಿಂದೂಗಳಿಗಾಗಿ ಕಣ್ಣೀರು ಹಾಕಲಿಲ್ಲ. ದೆಹಲಿಯಿಂದ ಲಂಡನ್ ಗೆ ಸಿಗರೇಟ್ ತರಲು ನೆಹರು ವಿಮಾನ ಕಳಿಸುತ್ತಿದ್ದರು. ಇಂತವರನ್ನ ಸ್ವಾತಂತ್ರ್ಯ ಹೋರಾಟಗಾರರೆಂದು ಬಿಂಬಿಸುತ್ತಿದ್ದಾರೆ ಎಂದು ಹರಿಹಾಯ್ದರು.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ, ಎಲ್ಲ ಕೈ ನಾಯಕರು ಚೊಂಬು ಹಿಡ್ಕೊಂಡು ಹೋಗ್ತಾರೆ: ಯತ್ನಾಳ್ ವಾಗ್ದಾಳಿ
ಈ ದೇಶದ ಅನ್ನ ತಿಂದು ದೇಶವಿರೋಧಿ ಘೊಷಣೆ ಕೂಗ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ವಿಧಾನಸಭೆ ಒಳಗೆನೇ ಪಾಕಿಸ್ತಾನ ಪರ ಘೋಷಣೆ ಕೂಗಿದರು. ಆದರೆ ಸಿಎಂ ಸಿದ್ದರಾಮಯ್ಯ ತಕ್ಷಣ ಅದು ಪಾಕಿಸ್ತಾನ ಪರ ಅಲ್ಲ, ಅಭ್ಯರ್ಥಿ ಪರ ಎಂದು ತಿಪ್ಪೆ ಸಾರಿಸಲು ಯತ್ನಿಸಿದರು. ಆದರೆ ಅದು ಪಾಕಿಸ್ತಾನ ಪರ ಘೋಷಣೆ ಎಂಬುದು ಬಯಲಾದಾಗ ಪ್ರತಿಕ್ರಿಯೆ ನೀಡದೆ ತಣ್ಣಗಾದರು. ಈ ದೇಶದ ಅನ್ನ ತಿಂದು ಪಾಕಿಸ್ತಾನ ಪರ ಘೋಷಣೆ ಕೂಗಿದವರು ತಾಯಿಗಂಡರು ಎಂದು ವಿಧಾನಸಭೆಯಲ್ಲಿ ಹೇಳಿದ್ದೆ. ಆಗ ಇಂಥ ಶಬ್ದ ಉಪಯೋಗಿಸಬಾರದು ಎಂದು ರಾಯರೆಡ್ಡಿ ಹೇಳಿದರು ಆದರೆ ಯುಟಿ ಖಾದರ್ ಒಳ್ಳೆಯವರು, ಇಂಥ ಶಬ್ದ ಬಳಸಲು ಅವಕಾಶ ಕೊಟ್ಟರು ಎಂದರು.
ಎಲ್ಲರ ಆಸ್ತಿ ಸರ್ವೆ ಮಾಡುತ್ತೇವೆ. 55% ಸರಕಾರಕ್ಕೆ 45% ನಿಮಗೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಸತೀಶ ಜಾರಕಿಹೊಳಿ ಅವರೇ ನಿಮ್ಮ ಆಸ್ತಿಯಲ್ಲಿನ 55% ಕೊಡಿ. ಜಾರಕಿಹೊಳಿ ಮನೆಯಲ್ಲಿನ ಎಲ್ಲರೂ ಎಂಎಲ್‌ಎ ಎಂಪಿ ಆಗಬೇಕಾ? ಎಸ್‌ಟಿ ಸಮಾಜದಲ್ಲಿ ಬೇರೆ ಯಾರೂ ಇಲ್ಲವ? ಹಿಂದೂ ಪದನೇ ಅಶ್ಲೀಲ ಎಂದು ಸತೀಶ ಜಾರಕಿಹೊಳಿ ಹೇಳಿದ್ರು. ಇಂಥವರಿಗೆ ಮತ ಹಾಕಿದ ಹಿಂದೂಗಳೇ ಅಶ್ಲೀಲ. ಈ ಬಾರಿ ಇನ್ನೂ ನಾಚಿಕೆ ಬಿಟ್ಟು ಮತ ಹಾಕ್ತಿರೋ ಬಿಡ್ತಿರೋ ನಿಮಗೇ ಬಿಟ್ಟಿದ್ದು ಎಂದು ಸತೀಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದರು.
ಮೂಢನಂಬಿಕೆ ವಿರೋಧಿಸಿ ಸ್ಮಶಾನದಲ್ಲಿ ಅಡ್ಡಾಡಿದ ಸತೀಶ, ಚುನಾವಣೆಯಲ್ಲಿ ದೇವಸ್ಥಾನಕ್ಕೆ ಬರುತ್ತಿದ್ದಾರೆ. ಸಾವಕಾರರು ಹಣ ಕೊಟ್ರೆ ತೆಗೆದುಕೊಳ್ಳಿ. ಮತ ಹಾಕುವಾಗ ಸರಿಯಾದ ಅಭ್ಯರ್ಥಿಗೆ ಹಾಕಿ. ಚಿಕ್ಕೋಡಿ ಸಾಮಾನ್ಯ ಕ್ಷೇತ್ರದಲ್ಲೂ ಎಸ್‌ಟಿ ಸಮಾಜದ ಜಾರಕಿಹೊಳಿ ಸ್ಪರ್ಧಿಸಿರುವುದಕ್ಕೆ ಯತ್ನಾಳ್ ವಿರೋಧ ವ್ಯಕ್ತಪಡಿಸಿದರು. ಸಾಮಾನ್ಯ ಕ್ಷೇತ್ರದಲ್ಲಿ ಮೀಸಲು ಸಮಾಜದವರು ಚುನಾವಣೆ ನಿಂತರೇ ನಾವೆಲ್ಲ ಎಲ್ಲಿಗೆ ಹೋಗಬೇಕು? ನಿಮಗಾಗಿ ಮೀಸಲು ಕ್ಷೇತ್ರಗಳಿವೆ, ಅಲ್ಲಿ ಹೋಗಿ ಸ್ಪರ್ದೆ ಮಾಡಿ. ಎಲ್ಲ ಸಮುದಾಯ ಒಗ್ಗಟ್ಟಾಗಿ ಬುದ್ಧಿ ಕಲಿಸಿದರೆ ಕ್ಷೇತ್ರ ಜನರಲ್ ಆಗಿ ಉಳಿಯುತ್ತದೆ. ಇಲ್ಲದಿದ್ರೆ ಜನರು ಸಾವಕಾರ ಮನೆಗೆ ಹೋಗಿ ಕೈ ಮುಗಿದು ಅವರ ಕಾಲಿಗೆ ಬೀಳಬೇಕಾಗುತ್ತದೆ. ಹೀಗಾಗಿ ಈ ಚುನಾವಣೆಯಲ್ಲಿ ಉಳಿದ ಸಮುದಾಯದವರೆಲ್ಲ ಒಗ್ಗಟ್ಟಾಗಿ ಮತದಾನ ಮಾಡಬೇಕು ಎಂದರು.
ಬುಕ್ಕಿಂಗ್ ಸ್ವಾಜೀಜಿ ಬದ್ಮಾಶ್ ಅದಾನ!
ದೇವಸ್ಥಾನಕ್ಕೆ ಕಾಣಿಕೆ ಕೊಟ್ಟರೆ ಅದೇ ಹಣವನ್ನ ಸಿಎಂ ಮುಸಲ್ಮಾನರಿಗೆ ಕೊಡುತ್ತಾನೆ. ಸಿಎಂ ಸಿದ್ದರಾಮಯ್ಯ ವಕ್ಫ ಬೋರ್ಡ್ಗೆ 100 ಕೋಟಿ ರೂ. ಕಂಪೌಂಡ್ ನಿರ್ಮಿಸುತ್ತಿದ್ದಾರೆ. ಹೀಗಾಗಿ ಜಾತಿ ಜಾತಿ ಎನ್ನದೇ ಎಲ್ಲರೂ ಬಿಜೆಪಿಗೆ ಮತ ಚಲಾಯಿಸುವಂತೆ ಯತ್ನಾಳ ಮನವಿ ಮಾಡಿದರು. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಮುಸ್ಲಿಂ ಮೀಸಲಾತಿ ತೆಗೆಯುವದು ಗ್ಯಾರಂಟಿ. ನಾನು ಹಿಂದೆನೇ 'ಏಯ್ ಬೊಮ್ಮಾಯಿ ನಾಟಕ ಮಾಡಿ ಮೀಸಲಾತಿ ತೆಗೆಯದಿದ್ರೆ ನೋಡು ಎಂದೆ. ತಾಯಿ ಆಣೆ ಮಾಡಿ ಹೇಳ್ತೀನಿ ಬೊಮ್ಮಾಯಿ ಮೀಸಲಾತಿ ಕೊಡ್ತಾನೆ ಎಂದಿದ್ದಾರೆ ಎಲ್ಲ ಲಿಂಗಾಯತ ಜಾತಿ, ಉಪಜಾತಿಗಳಿಗೂ ಮೀಸಲಾತಿ ನೀಡುವಂತೆ ಹೇಳಿದ್ದೇನೆ.
ಬುಕ್ಕಿಂಗ್ ಸ್ವಾಮೀಜಿ ಕಾಂಗ್ರೆಸ್ ಗೆ ಮತ ಹಾಕಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾನೆ. ಬೊಮ್ಮಾಯಿಗೆ ಹೇಳಿದೆ ಇವನು ಬದ್ಮಾಶ್ ಅದಾನ ಇವನನ್ನ ನಂಬಬೇಡಿ ಅಂತಾ. ಬೊಮ್ಮಾಯಿ, ಯಡಿಯೂರಪ್ಪ ಸೇರಿ 15 ಕೋಟಿ ಕೊಟ್ಟಿದ್ದಾರೆ. ಕೊಡಬೇಡ ಎಂದ್ರೂ ಕೇಳಲಿಲ್ಲ. ಮೊನ್ನೆ ಪಿಡಿಓ ನಕಲಿ ಸಹಿ ಮಾಡಿ ಹಣ ತೆಗೆದಿದ್ದಾರೆ. ಇಂತಹ ಕಾವಿ ಹಾಕೊಂಡು ಓಡಾಡುವ ನಾಟಕ ಕಂಪನಿಯ ಸ್ವಾಮಿಗಳು ಇದ್ದಾರೆ. ಸ್ವಾಮೀಗಳಿಗಿಂತ ರಾಜಕಾರಣಿಗಳು ಉತ್ತಮ. ಎಂದು ಪರೋಕ್ಷವಾಗಿ ಹರಿಹರದ ವಚನಾನಂದಸ್ವಾಮಿ ವಿರುದ್ಧ ಹರಿಹಾಯ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.
ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
ಪಂಚಮಸಾಲಿಗಳಿಗೆ ಅನ್ಯಾಯ ಆಗಿದೆ ಅಂತಿದ್ದಾರೆ. ಮುಂದೊಂದು ದಿನ ಪಂಚಮಸಾಲಿಗಳನ್ನೇ ಮುಖ್ಯಮಂತ್ರಿ ಮಾಡಿದ್ರೆ ಅವಾಗ ಏನ್ ಮಾಡ್ತಿರಾ? ನನ್ನ ಬಳಿ ಧಮ್ಮು ತಾಕತ ಇದೆ. ಅದನ್ನ ತೆಗೆದುಕೊಂಡು ಬರ್ತಿನಿ. ಮತ್ತೆ ನಾನೇ ಸಿಎಂ ಆಗುತ್ತೇನೆ ಎಂದರು. ಮುಂದುವರಿದು, ಉಮೇಶ ಕತ್ತಿ ಸ್ವರ್ಗದಲ್ಲಿ ಇದ್ದಾರೆ ಅವರ ಬದಲು ನಾನೇ ಸಿಎಂ ಆಗುತ್ತೇನೆ. ಈ ಸಲ ಬಿಜೆಪಿ ಬಂದರೆ ನಾನೇ ಮುಖ್ಯಮಂತ್ರಿ. ಕೇವಲ ಅಪ್ಪ-ಮಕ್ಕಳು ಸಿಎಂ ಆಗಬೇಕಾ? ಎಂದು ಯಡಿಯೂರಪ್ಪ ಕುಟುಂಬದ ವಿರುದ್ಧವೂ ವಾಗ್ದಾಳಿ ನಡೆಸಿದರು.