ಬರದ ನಾಡಲ್ಲೂ ಯಶಸ್ವಿ ಕೃಷಿ : ಡ್ರ್ಯಾಗನ್ ಫ್ರೂಟ್ ಬೆಳೆದು ಬಂಪರ್ ಲಾಭ

Aug 12, 2021, 8:57 AM IST

ಕೋಲಾರ (ಆ.12):  ಜಿಲ್ಲೆ ಅಂದ್ರೆ ಸಾಕು ಬರದನಾಡು ಅಂತಾನೆ ಹೆಸರುವಾಸಿ ಪಡೆದಿರುವ ಜಿಲ್ಲೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದು ಜಿಲ್ಲೆಯ ಜನರನ್ನು ಕಂಗೆಟ್ಟಿಸಿದೆ. ಆದ್ರೆ ಜಿಲ್ಲೆಯ ಕೃಷಿಕರು ಮಾತ್ರ ಇದಕೆಲ್ಲಾ ಸೆಡ್ಡು ಹೊಡೆದು ಹೊಸ ಹೊಸ ಬೆಳೆ ಬೆಳೆಯುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿ ನಿಂತಿದ್ದಾರೆ. ಅದರಂತೆ ಇದೀಗ ಕೋಲಾರ ತಾಲೂಕಿನ ಕಾಡದೇವನಹಳ್ಳಿಯ ರೈತ ವೆಂಕಟೇಶಪ್ಪ ಡ್ರಾಗನ್ ಹಣ್ಣನ್ನು ಬೆಳೆಯುವ ಮೂಲಕ ಜಿಲ್ಲೆಗೆ ಮತ್ತೊಂದು ಹಿರಿಮೆ ತಂದುಕೊಟ್ಟಿದ್ದಾರೆ.

ಆಕೃತಿ ಕಾರಣ ಡ್ರ್ಯಾಗನ್ ಹಣ್ಣಿನ ಹೆಸ್ರು ಬದಲಿಸಿದ್ರೆ ಬಾಳೆ ಹಣ್ಣಿಗೆ? ಗುಜರಾತ್ ನಿರ್ಧಾರ ಟ್ರೋಲ್!

ಜ್ಯೂಸ್ ಗೆ ಅತೀ ಹೆಚ್ಚು ಬೇಡಿಕೆಯಲ್ಲಿರುವ ಡ್ರಾಗನ್ ಹಣ್ಣನ್ನು ಬೆಳೆ ಬೆಳೆಯುವ ಮೂಲಕ ರೈತ ವೆಂಕಟೇಶಪ್ಪ ಹೆಚ್ಚಿನ ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದಾರೆ. ತಮ್ಮ ತೋಟದಲ್ಲಿ ಸುಮಾರು 2 ಸಾವಿರ ಗಿಡಗಳನ್ನು ನಾಟಿ ಮಾಡಲಾಗಿದ್ದು,ಇದಕ್ಕಾಗಿ 8 ರಿಂದ 10 ಲಕ್ಷ ಖರ್ಚು ಮಾಡಿದ್ದಾರೆ. ಈಗಾಗಲೇ ನಾಟಿ ಮಾಡಿ 18 ತಿಂಗಳು ಕಳೆದಿದ್ದು ಇದೀಗ ಫಸಲು ಬಂದಿದ್ದು ಒಂದು ಹಣ್ಣಿಗೆ 35 ರಿಂದ 40 ರುಪಾಯಿ ವರೆಗೂ ಮಾರಾಟವಾಗ್ತಿದೆ.