Jan 25, 2020, 1:32 PM IST
ವಿಜಯಪುರ(ಜ.25):ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಎರಡು ಪ್ರತ್ಯೇಕ ಕಡೆಗಳಲ್ಲಿ ಅಗ್ನಿ ಅವಘಡಗಳು ಸಂಭವಿಸಿವೆ. ತಾಲೂಕಿನ ಅಲಿಯಾಬಾದ್ ತಾಂಡಾ 2ರಲ್ಲಿ ರತ್ನು ರಾಠೋಡ ಎಂಬುವವರಿಗೆ ಸೇರಿದ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಮನೆ ಸುಟ್ಟು ಕರಕಲಾಗಿದೆ. ಮನೆಯಲ್ಲಿದ್ದ ಬಟ್ಟೆ, ಧವಸ ಧಾನ್ಯ, ದಿನೋಪಯೋಗಿ ವಸ್ತುಗಳು ಸೇರಿದಂತೆ ಅಂದಾಜು ಎರಡು ಲಕ್ಷ ರೂಪಾಯಿ ವಸ್ತುಗಳು ಹಾನಿಯಾಗಿವೆ.
ಇನ್ನು ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ಅಗ್ನಿ ಅವಘಡಕ್ಕೆ ಇಲೆಕ್ಟ್ರಾನಿಕ್ ಹಾಗೂ ಹಾರ್ಡವೇರ್ ಅಂಗಡಿ ಸುಟ್ಟು ಭಸ್ಮವಾಗಿದೆ. ಚಿದಾನಂದ ಹೊನ್ನಳ್ಳಿ ಎಂಬುವವರಿಗೆ ಸೇರಿದ ಅಂಗಡಿಯಲ್ಲಿದ್ದ ಇಲೆಕ್ಟ್ರಿಕಲ್ ಉಪಕರಣಗಳು ಸುಟ್ಟು ಭಸ್ಮವಾಗಿವೆ. ಇದರಿಂದ ಅಂಗಡಿ ಮಾಲೀಕನಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.