IPL

ಕಿಂಗ್ಸ್‌ ಇಲೆವನ್ ಪಂಜಾಬ್‌ ಸವಾಲೆದುರಿಸಲು ರಾಯಲ್ಸ್ ರೆಡಿ..!

Sep 27, 2020, 4:56 PM IST

ಶಾರ್ಜಾ(ಸೆ.27): ಐಪಿಎಲ್ ಆವೃತ್ತಿಯ 9ನೇ ಪಂದ್ಯದಲ್ಲಿ ಕೆ.ಎಲ್. ರಾಹುಲ್ ನೇತೃತ್ವದ ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಸೂಪರ್ ಸಂಡೆಯಲ್ಲಿಂದು ಜಿದ್ದಾಜಿದ್ದಿನ ಪೈಪೋಟಿಯನ್ನು ನಿರೀಕ್ಷಿಸಲಾಗಿದೆ.

ಶಾರ್ಜಾದ ಅಂತಾರಾಷ್ಟ್ರೀಯ ಮೈದಾನದಲ್ಲಿ ಪಂದ್ಯ ಜರುಗಲಿದ್ದು, ಮತ್ತೊಮ್ಮೆ ಸಿಕ್ಸರ್ ಸುರಿಮಳೆಯನ್ನು ನಿರೀಕ್ಷಿಸಲಾಗಿದೆ. ಉಭಯ ತಂಡಗಳಲ್ಲೂ ಸ್ಫೋಟಕ ಬ್ಯಾಟ್ಸ್‌ಮನ್ ದಂಡೇ ಇರುವುದರಿಂದ ಶಾರ್ಜಾದಲ್ಲಿಂದು ರನ್ ಮಳೆ ಹರಿಯುವ ಸಾಧ್ಯತೆಯಿದೆ. 

IPL 2020: ಹೊಡಿಬಡಿಯಾಟದಲ್ಲಿ ಮಿಂಚುತ್ತಿದ್ದಾನೆ ಈ 20ರ ಯುವ ಸ್ಪಿನ್ನರ್..!

ಇಂದಿನ ಪಂದ್ಯಕ್ಕೆ ಜೋಸ್ ಬಟ್ಲರ್ ರಾಜಸ್ಥಾನ ತಂಡವನ್ನು ಕೂಡಿಕೊಳ್ಳಲಿದ್ದು, ತಂಡದ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದೆ. ಉಭಯ ತಂಡಗಳ ಬಲಾಬಲಗಳೇನು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.