UP Election ಬಿಜೆಪಿ ನಾಯಕರ ಅಸ್ತ್ರಕ್ಕೆ ಅಖಿಲೇಶ್ ಯಾದವ್ ಪ್ರತ್ಯಸ್ತ್ರ

Mar 2, 2022, 6:25 PM IST

ಆರನೇ ಹಂತದ ಚುನಾವಣೆಗೆ ಉತ್ತರ ಪ್ರದೇಶದಲ್ಲಿ ವೇದಿಕೆ ಸಿದ್ಧವಾಗಿದೆ. ಎಲ್ಲಾ ಪಕ್ಷಗಳ ಘಟಾನುಘಟಿ ನಾಯಕರು ಉತ್ತರ ಪ್ರದೇಶಲ್ಲಿ ಬೀಡು ಬಿಟ್ಟಿದ್ದು ಮಾತಿನ ಸಮರ ಮುಂದುವರಿಸಿದ್ದಾರೆ. ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಅಮಿತ್ ಶಾ, ಜೆಪಿ ನಡ್ಡಾ, ಯೋಗಿ ಆದಿತ್ಯನಾಥ್, ಶಿವರಾಜ್ ಸಿಂಗ್ ಚೌಹಾಣ್ ಮತ್ತಿತರ ಬಿಜೆಪಿ ನಾಯಕರು ಸಮಾಜವಾದಿ ಪಕ್ಷ ಹಾಗೂ ಅದರ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

UP Election ಕ್ರಿಕೆಟ್‌ ಮೊರೆ ಹೋದ ಬಿಜೆಪಿ ಚಾಣಕ್ಯ ಅಮಿತ್ ಶಾ

ಪ್ರಧಾನಿ ಮೋದಿ ಕುಟುಂಬ ರಾಜಕಾರಣವನ್ನು ಮುಂದಿಟ್ಟು ಮಾತಿನ ಪ್ರಹಾರ ನಡೆಸಿದರೆ, ಅಮಿತ್ ಶಾ ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟಿದ್ದರು. ಶಿವರಾಜ್ ಸಿಂಗ್ ಚೌಹಾಣ್ ಅಖಿಲೇಶ್‌ರನ್ನು ದಂಗೇಶ್ ಎಂದು ಕರೆದು ಔರಂಗಝೇಬ್‌ಗೆ ಹೋಲಿಸಿದ್ದರು. 

ಬಲ್ಲಿಯಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಮಾಜವಾದಿ ಪಕ್ಷದ ನಾಯಕ  ಅಖಿಲೇಶ್ ಯಾದವ್ ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ. ಬಿಜೆಪಿ ವಿರುದ್ಧ ರೈತ ಅಸ್ತ್ರವನ್ನು ಬಳಸಿದ್ದಾರೆ.   ಈ ಚುನಾವಣೆ ಬಲ್ಲಿಯಾ ಹಾಗೂ ಚಲ್ಲಿಯಾ (ಅಂದರೆ ಮೋಸ)ದ ನಡುವಿನ ಹಣಾಹಣಿಯಾಗಿದೆ ಎಂದಿದ್ದಾರೆ. ಅಧಿಕಾರಕ್ಕೆ ಬಂದರೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಬಿಜೆಪಿ ಹೇಳಿತ್ತು. ರೈತರ ಆದಾಯ ಡಬಲ್ ಆಗಿದೆಯಾ ಎಂದು ಅಖಿಲೇಶ್ ಪ್ರಶ್ನಿಸಿದ್ದಾರೆ. ರೈತರಿಗೆ ರಸಗೊಬ್ಬರ ಸಿಗುತ್ತಿದೆಯೇ? ಅಥ್ವಾ ಅವರ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿದೆಯೇ ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.