ಚೀನಾ ವಿರುದ್ಧ ಮತ್ತೆ ಕ್ವಾಡ್‌ ದೇಶಗಳ ಗುಡುಗು: ಇತ್ತ ಬೈಡೆನ್‌ ‘ಖಾಸಗಿ ನುಡಿ’ ಬಹಿರಂಗ

By Kannadaprabha NewsFirst Published Sep 23, 2024, 8:03 AM IST
Highlights

ಇಂಡೋ- ಪೆಸಿಫಿಕ್‌ ವಲಯದಲ್ಲಿ ಚೀನಾದ ಹೆಚ್ಚುತ್ತಿರುವ ಪ್ರಾಬಲ್ಯವನ್ನು ಎದುರಿಸಲು ಕ್ವಾಡ್ ದೇಶಗಳು ಮತ್ತೊಮ್ಮೆ ಒಗ್ಗಟ್ಟಿನಿಂದ ನಿಂತಿದ್ದು, ಈ ವಲಯದಲ್ಲಿ ಯಾವುದೇ ಏಕಪಕ್ಷೀಯ ಬದಲಾವಣೆಗಳನ್ನು ವಿರೋಧಿಸುವುದಾಗಿ ಹೇಳಿವೆ. ಕ್ಯಾನ್ಸರ್‌ ನಿವಾರಣೆಗೆ ಹೊಸ ಒಪ್ಪಂದ ಮಾಡಿಕೊಂಡಿರುವುದಲ್ಲದೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ವಿಸ್ತರಿಸುವಂತೆಯೂ ಒತ್ತಾಯಿಸಿವೆ.

ವಾಷಿಂಗ್ಟನ್‌: ಇಂಡೋ- ಪೆಸಿಫಿಕ್‌ ವಲಯದಲ್ಲಿ ತನ್ನ ಅಧಿಪತ್ಯ ಸ್ಥಾಪಿಸಲು ಹವಣಿಸುತ್ತಿರುವ ಚೀನಾಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿರುವ ಕ್ವಾಡ್‌ ದೇಶಗಳು, ‘ಇಂಡೋ ಪೆಸಿಫಿಕ್‌ ವಲಯದಲ್ಲಿ ಯಥಾಸ್ಥಿತಿಯಲ್ಲಿನ ಯಾವುದೇ ಬದಲಾವಣೆ ಒಪ್ಪಲು ಸಾಧ್ಯವಿಲ್ಲ. ಈ ವಲಯದಲ್ಲಿ ಮುಕ್ತ, ಸ್ವಾತಂತ್ರ್ಯ, ಶಾಂತಿ, ಸ್ಥಿರತೆ ಕಾಪಾಡಲು ನಾವು ಬದ್ಧ’ ಎಂದು ಘೋಷಿಸಿವೆ.

ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಅವರ ತವರು ಡೆಲಾವರೆಯ ವಿಲ್ಮಿಂಗ್ಟನ್‌ನಲ್ಲಿ ಶನಿವಾರ ನಡೆದ ಭಾರತ- ಅಮೆರಿಕ- ಆಸ್ಟ್ರೇಲಿಯಾ ಮತ್ತು ಜಪಾನ್‌ ದೇಶಗಳ ಒಕ್ಕೂಟವಾದ ಕ್ವಾಡ್‌ ಸಭೆ ಇಂಥದ್ದೊಂದು ನಿರ್ಣಯವನ್ನು ಅಂಗೀಕರಿಸಿದೆ.

Latest Videos

‘ಕ್ವಾಡ್‌ ಸದುದ್ದೇಶದ ಶಕ್ತಿಯಾಗಿದೆ ಮತ್ತು ಹಿಂದೆಂದಿಗಿಂತಲೂ ಹೆಚ್ಚು ವ್ಯೂಹಾತ್ಮಕವಾಗಿ ರೂಪುಗೊಂಡಿದೆ. ರೂಪುಗೊಂಡ ನಾಲ್ಕೇ ವರ್ಷಗಳಲ್ಲಿ ಇಂಡೋ- ಪೆಸಿಫಿಕ್‌ ವಲಯದಲ್ಲಿ ಶಾಶ್ವತ ಪರಿಣಾಮಗಳನ್ನು ಬೀರುವಲ್ಲಿ ಸಂಘಟನೆ ಯಶಸ್ವಿಯಾಗಿದೆ ಮತ್ತು ಭವಿಷ್ಯಕ್ಕೆ ಹೊಸ ಮಾರ್ಗ ತೋರಿಸುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಇಂಡೋ- ಪೆಸಿಫಿಕ್‌ ವಲಯ ಜಾಗತಿಕ ಭದ್ರತೆ ಮತ್ತು ಸಮೃದ್ಧಿಯಲ್ಲಿ ಕಡೆಗಣಿಸಲಾಗದ ಅಂಶವಾಗಿದೆ. ಈ ವಲಯದಲ್ಲಿ ಶಾಂತಿ, ಸ್ಥಿರತೆ ಕಾಪಾಡಲು ನಾವು ಬದ್ಧರಾಗಿದ್ದೇವೆ. ಇದರಲ್ಲಿ ಯಾವುದೇ ಬದಲಾವಣೆಗೆ ನಡೆಸುವ ಯಾವುದೇ ಏಕಪಕ್ಷೀಯ ಕಾರ್ಯಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಇತ್ತೀಚೆಗೆ ಈ ವಲಯದಲ್ಲಿ ನಡೆದ ಅಕ್ರಮ ಕ್ಷಿಪಣಿ ದಾಳಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಿಗೆ ವಿರುದ್ಧವಾಗಿರುವುದನ್ನು ನಾವು ಗಮನಿಸಿದ್ದೇವೆ. ಸಮುದ್ರಯಾನ ವಲಯದಲ್ಲಿ ಇತ್ತೀಚೆಗೆ ನಡೆಸಲಾದ ಅಪಾಯಕಾರಿ ಮತ್ತು ಆಕ್ರಮಣಕಾರಿ ಕೆಲಸಗಳನ್ನೂ ನಾವು ಖಂಡಿಸುತ್ತೇವೆ’ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಕ್ಯಾನ್ಸರ್‌ ವಿರುದ್ಧ ಕ್ವಾಡ್‌ ಹೋರಾಟ

ಕೋವಿಡ್‌ ಸಮಯದಲ್ಲಿ ಪಾಲುದಾರಿಕೆ ತೋರಿದ್ದ ಕ್ವಾಡ್‌ ದೇಶಗಳು ಕ್ವಾಡ್‌ ಕ್ಯಾನ್ಸರ್‌ ಮೂನ್‌ಶಾಟ್‌ ಎಂಬ ಹೊಸ ಒಪ್ಪಂದದ ಕುರಿತೂ ಘೋಷಣೆ ಮಾಡಿವೆ. ಈ ಯೋಜನೆ ಮೂಲಕ ಇಂಡೋ- ಪೆಸಿಫಿಕ್‌ ವಲಯದಲ್ಲಿನ ಕ್ಯಾನ್ಸರ್‌ನಿಂದ ಜನರ ಜೀವ ಉಳಿಸಲು ನಾಲ್ಕೂ ದೇಶಗಳು ಪರಸ್ಪರ ಕೈ ಜೋಡಿಸಲು ನಿರ್ಧರಿಸಿವೆ.

ಮಾರ್ಕ್ಸ್‌ವಾದಿ ನಾಯಕ ಅನುರ ಕುಮಾರ ಡಿಸಾನಾಯಕೆ ಶ್ರೀಲಂಕಾದ ಮುಂದಿನ ಅಧ್ಯಕ್ಷ!

ವಿಶ್ವಸಂಸ್ಥೆ ಭದ್ರತಾ ಮಂಡಳಿ ವಿಸ್ತರಣೆಗೆ ಬೆಂಬಲ

ಭಾರತ ಸೇರಿ ಹಲವು ದೇಶಗಳು ವಿಶ್ವಸಂಸ್ಥೆ ಭದ್ರತಾ ಮಂಡಳಿ ವಿಸ್ತರಣೆ ಮಾಡಿ ತಮಗೂ ಸದಸ್ಯತ್ವಕ್ಕೆ ಒತ್ತಾಯಿಸುತ್ತಿವೆ. ಈ ಕೂಗನ್ನು ಬೆಂಬಲಿಸಲು ಕ್ವಾಡ್‌ ಶೃಂಗ ನಿರ್ಧರಿಸಿದೆ.

ಕ್ವಾಡ್‌ ಯಾರ ವಿರುದ್ಧವೂ ಅಲ್ಲ. ಇದು ಅಂತಾರಾಷ್ಟ್ರೀಯ ನಿಯಮಗಳ ಅನ್ವಯ ಮತ್ತು ಪ್ರಾದೇಶಿಕ ಸಮಗ್ರತೆ ಗೌರವಿಸುವ ಒಕ್ಕೂಟ. ಇಂಡೋ- ಪೆಸಿಫಿಕ್‌ ವಲಯದಲ್ಲಿ ಸ್ವತಂತ್ರ, ಮುಕ್ತ, ಸಮೃದ್ಧ ಮತ್ತು ಸಮಗ್ರ ಬೆಳವಣಿಗೆ ನಮ್ಮ ಆದ್ಯತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಚೀನಾ ನಮ್ಮನ್ನು ಪರೀಕ್ಷಿಸುತ್ತಿದೆ: ಬೈಡೆನ್‌ ‘ಖಾಸಗಿ ನುಡಿ’ ಬಹಿರಂಗ

ವಾಷಿಂಗ್ಟನ್‌: ಕ್ವಾಡ್‌ ದೇಶಗಳ ನಾಯಕರ ಜೊತೆಗಿನ ಆಪ್ತ ಸಂವಾದದ ವೇಳೆ, ಚೀನಾ ನಮ್ಮನ್ನು ಪರೀಕ್ಷಿಸುತ್ತಿದೆ ಎಂದು ಜೋ ಬೈಡೆನ್‌ ಅವರು ಖಾಸಗಿಯಾಗಿ ಆಡಿದ ಮಾತುಗಳು ಮೈಕ್‌ನಲ್ಲಿ ಪ್ರಸಾರವಾಗಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಆಕ್ರಮಣಕಾರಿ ವರ್ತಿಸುವ ಮೂಲಕ ಈ ವಲಯದಲ್ಲಿನ ನಮ್ಮನ್ನೆಲ್ಲಾ ವಿವಿಧ ಸ್ತರಗಳಲ್ಲಿ ಪರೀಕ್ಷಿಸುತ್ತಿದ್ದಾರೆ. ಅದರಲ್ಲಿ ತಾಂತ್ರಿಕ ಮತ್ತು ಆರ್ಥಿಕ ವಿಷಯಗಳೂ ಸೇರಿವೆ ಎಂದೂ ಬೈಡೆನ್‌ ಹೇಳಿದ್ದಾರೆ.

ಕ್ವಾಡ್ ಶೃಂಗ ಸಭೆಯಲ್ಲಿ ಗೊಂದಲಕ್ಕೀಡಾದ ಬೈಡನ್: ಸಮಯಪ್ರಜ್ಞೆ ಮೆರೆದ ಕಮಲಾ ಹ್ಯಾರಿಸ್

click me!