ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರನೇ ಅವಧಿಯಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದಾರೆ. ಅವರು ಉತ್ತಮ ಆಡಳಿತ ಮತ್ತು ಸಮೃದ್ಧ ಭಾರತಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡುವುದಾಗಿ ಘೋಷಿಸಿದರು.
ನ್ಯೂಯಾರ್ಕ್:ಪ್ರಧಾನಿಯಾಗಿ ನನ್ನ ಮೂರನೇ ಅವಧಿಯಲ್ಲಿ ಭಾರತವನ್ನು ಅಭಿವೃದ್ಧಿ ಶೀಲವನ್ನಾಗಿ ಮಾಡುವ ನಿಟ್ಟಿನಲ್ಲಿ ಹಲವು ಮಹತ್ವಾಕಾಂಕ್ಷೆಯ ಗುರಿ ರೂಪಿಸಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಅಲ್ಲದೆ ಉತ್ತಮ ಆಡಳಿತ ಮತ್ತು ಸಮೃದ್ಧ ಭಾರತಕ್ಕಾಗಿ ನನ್ನ ಜೀವನ ಮೀಸಲಿಟ್ಟಿದ್ದೇನೆ ಎಂದು ಘೋಷಿಸಿದ್ದಾರೆ. 3 ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಇಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದರು.
ಈ ವೇಳೆ ಭಾರತೀಯ ಸಮುದಾಯದ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದ ಮೋದಿ, ಭಾರತದ ನಮಸ್ತೆ ಇಂದು ವಿಶ್ವವ್ಯಾಪಿಯಾಗುವುದಕ್ಕೆ ವಿದೇಶಗಳಲ್ಲಿನ ಭಾರತೀಯ ಸಮುದಾಯವೇ ಕಾರಣ. ನೀವೆಲ್ಲಾ ರಾಷ್ಟ್ರ- ದೂತರಿದ್ದಂತೆ. ನೀವು ಭಾರತದ ಪ್ರಚಾರ ರಾಯಭಾರಿಗಳು ಇಡೀ ವಿಶ್ವಕ್ಕೆ ಎಐ ಎಂದರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಆದರೆ ನಮ್ಮ ಪಾಲಿಗೆ ಅಮೆರಿಕ-ಇಂಡಿಯಾ ಸ್ಪೂರ್ತಿ ಇದ್ದಂತೆ. ಅಮೆರಿಕ ಅಧ್ಯಕ್ಷ ಬೈಡೆನ್ ನನ್ನನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು. ಇದು 140 ಕೋಟಿ ಭಾರತೀಯರಿಗೆ ಸಂದ ಗೌರವ' ಎಂದು ಹೇಳಿದರು.
undefined
ಇದೇ ವೇಳೆ ನಾವು ಭಾರತದ ಸ್ವಾತಂತ್ರ್ಯಕ್ಕಾಗಿ ಮಡಿಯದೇ ಇರಬಹುದು, ಆದರೆ ನಾವು ದೇಶಕ್ಕಾಗಿ ಜೀವಿಸಬಹುದು. ಮೊದಲ ದಿನದಿಂದಲೂ ನಾನು ನಿರ್ಧರಿಸಿದ್ದೆ. ನನ್ನ ಇಡೀ ಜೀವನವನ್ನು ಉತ್ತಮ ಆಡಳಿತ ಮತ್ತು ಸಮೃದ್ಧ ಭಾರತಕ್ಕೆ ಮೀಸಲಿಡುತ್ತೇನೆ ಎಂದು ಆದರೆಡೆಗೆ ಇದೀಗ ನಮ್ಮ ಪಯಣ ಆರಂಭವಾಗಿದೆ ಎಂದರು.
ಕ್ವಾಡ್ ಶೃಂಗ ಸಭೆಯಲ್ಲಿ ಗೊಂದಲಕ್ಕೀಡಾದ ಬೈಡನ್: ಸಮಯಪ್ರಜ್ಞೆ ಮೆರೆದ ಕಮಲಾ ಹ್ಯಾರಿಸ್
ಕಳೆದ 40 ವರ್ಷಗಳಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ದೇಶದ ಜನತೆ ನಮ್ಮ ಪರವಾಗಿ ಫಲಿತಾಂಶ ನೀಡಿ ದೇಶ ಮುನ್ನಡೆಸುವ ಹೊಣೆ ವಹಿಸಿದ್ದಾರೆ. ನನ್ನ ಮೂರನೇ ಅವಧಿಯಲ್ಲಿ ನಾನು ಮೂರು ಪಟ್ಟು ಹೆಚ್ಚು ಹೂಣೆಗಾರಿಕೆಯಿಂದ ಮುಂದುವರೆಯುತ್ತಿದ್ದೇನೆ. ನಾವು ಸಮೃದ್ಧಭಾರತ, ಮುನ್ನುಗ್ಗುತ್ತಿರುವ ಭಾರತ, ಅಧ್ಯಾತ್ಮ ಭಾರತ, ಮಾನವೀಯತ ಮೊದಲು ಭಾರತದ ಎಂಬ ಪಂಚ ಪತ್ರಗಳ ಮೂಲಕ ವಿಕಸಿತ ಭಾರತ ನಿರ್ಮಾಣ ಮಾಡೋಣ ಎಂದು ಮೋದಿ ಕರೆ ಕೊಟ್ಟರು.
ಅವಕಾಶ ಸೃಷ್ಟಿ: ಕೋಟ್ಯಂತರ ಭಾರತೀಯರ ಕನಸುಗಳೇ ಇಂದು ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನೆಡೆ ಸುತ್ತಿದೆ. ಭಾರತ ಇದೀಗ ಅವಕಾಶಕ್ಕಾಗಿ ಕಾಯುವುದಿಲ್ಲ, ಬದಲಾಗಿ ಅದು ಅವಕಾತವನ್ನು ಸೃಷ್ಟಿಸುತ್ತಿದೆ. ಭಾರತ ಇಂದು ಹೊಸ ಶಕ್ತಿ ಮತ್ತು ಕನಸುಗಳಿಂದ ತುಂಬಿದೆ. ಪ್ರತಿ ದಿನ ನಾವು ಹೊಸಸಾಧನೆಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ಇಂದು ಭಾರತದ ಪುರುಷ ಮತ್ತು ಮಹಿಳಾ ಚೆಸ್ ತಂಡ ಒಲಿಂಪಿಯಾಡ್ ನಲ್ಲಿ ಚಿನ್ನದ ಪದಕ ಗೆದ್ದಿದೆ. ಇದು 100 ವರ್ಷಗಳ ಇತಿಹಾಸದಲ್ಲೇ ಮೊದಲ ಘಟನೆ ಎಂದು ಬಣ್ಣಿಸಿದರು.
ಇಂದು ವಿಶ್ವಸಂಸ್ಥೆಯಲ್ಲಿ ಭಾಷಣ: ಮೋದಿ ಸೋಮವಾರ ಪಾತ್ರಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾತನಾಡಲಿದ್ದಾರೆ.