Viral News: ಚಲಿಸುತ್ತಿದ್ದ ಆಟೋದಿಂದ ಬಿದ್ದ ಕಂದನ ಪ್ರಾಣ ಉಳಿದಿದ್ದೇ ರೋಚಕ: ವಿಡಿಯೋ ವೈರಲ್‌

Jun 15, 2022, 10:11 PM IST

Super Special News: ಅಪಾಯ ಅನ್ನೋದು ಅದ್ಯಾವಾಗ ಬಂದೊಕ್ಕರಿಸಿಕೊಳ್ಳುತ್ತೋ ಹೇಳೋದಕ್ಕಾಗೋದಿಲ್ಲ. ಅದ್ರಲ್ಲೂ ಈ ಮಕ್ಕಳಿದ್ದಾರಲ್ಲ ಪೋಷಕರ ಕಣ್ತಪ್ಪಿಸಿ ಅಪಾಯವನ್ನ ಮೈ ಮೇಲೆ ಎಳೆದುಕೊಳ್ತಾರೆ.  ಇಲ್ಲೊಂದುಕಡೆ ಚಲಿಸುತ್ತಿದ್ದ ಆಟೋದಿಂದ ಪುಟ್ಟ ಕಂದ ಕೆಳಗೆ ಬಿದ್ದಿತ್ತು.  ಇದೇ ವೇಳೆ ಬಸ್​ ವೇಗವಾಗಿ ನುಗ್ಗಿ ಬಂದಿತ್ತು. ಟ್ರಾಫಿಕ್‌ ಕ್ಲಿಯರ್‌ ಮಾಡುತ್ತಿದ್ದ ಪೊಲೀಸ್‌ ಕಣ್ಣಿಗೆ ರಸ್ತೆ ತಿರುವಿನಲ್ಲಿ ಆಟೋದಿಂದ ಮಗು ಕೆಳಗೆ ಬಿದ್ದ ದೃಶ್ಯ ಕಂಡಿತ್ತು. ಅದೇ ಸಮಯಕ್ಕೆ ಹಿಂಬದಿಯಿಂದ ಬಸ್‌ ಬರುತ್ತಿದ್ದನ್ನು ಗಮನಿಸಿ, ಕೂಡಲೇ ಬಸ್‌ ಅನ್ನು ಪೊಲೀಸ್‌ ಕೈ ಮಾಡಿ ಸಿಲ್ಲಿಸಿದ್ರು. ಬಸ್‌ ಚಾಲಕ ಕೂಡ ತನ್ನ ಸಮಯ ಪ್ರಜ್ಞೆಯಿಂದ ಬ್ರೇಕ್‌ ಹಾಕಿದ್ದಕ್ಕೆ ಮಗು ಬಚಾವಾಗಿದ್ದು. ಕೂಡಲೇ ಮಗುವನ್ನು ಕಾಪಾಡಿ ತಾಯಿಗೆ ಒಪ್ಪಿಸಿದ್ದಾರೆ. 

ಹೀಗೆ ರಸ್ತೆಯಲ್ಲಿ ಹೋಗುತ್ತಿದ್ದ ಎಲೆಕ್ಟ್ರಿಕ್ ರಿಕ್ಷಾದಿಂದ ಬಿದ್ದ ಮಗುವನ್ನು ಗಮನಿಸಿದ ಟ್ರಾಫಿಕ್‌ ಪೊಲೀಸ್‌ ಮಗುವನ್ನು ಕಾಪಾಡಿದ್ರು. ಈ ವಿಡಿಯೋವನ್ನು ಐಎಎಸ್‌ ಅಧಿಕಾರಿ ಅವನೀಶ್‌ ಶರಣ್‌ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.. ಇಲ್ಲಿ ಟ್ರಾಫಿಕ್​ ಪೊಲೀಸ್​ ಜೊತೆಗೆ ಬಸ್​ ಚಾಲಕನ ಸಮಯ ಪ್ರಜ್ಞೆಯಿಂದ ಕಂದನ ಜೀವ ಉಳಿದಿತ್ತು. ಸದ್ಯಾ ಈ ವಿಡಿಯೋ ಸೋಶಿಯಲ್​ ಮಿಡಿಯಾದಲ್ಲಿ ಸಿಕ್ಕಾಪಟ್ಟೆವೈರಲ್​ ಆಗ್ತಿದೆ. 

ಇದನ್ನೂ ನೋಡಿ: ಹುಲಿ ಜತೆ ನಟಿ ಆಶಿಕಾ ರಂಗನಾಥ್ ವಿಡಿಯೋ: ಸೋಷಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌